ಉಡುಪಿ : ಸೈನಿಕಾಕಾಂಕ್ಷಿಗಳಿಗೆ ರಸ್ತೆ ಬದಿಯೇ ಗತಿ; ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಆಕ್ರೋಶ
Published
0
ಉಡುಪಿ: ಅಜ್ಜರಕಾಡು ಮೈದಾನದಲ್ಲಿ ಸೇನಾ ನೇಮಕತಿ ನಡೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಸೈನಿಕಾಂಕ್ಷಿಗಳು ಉಳಿದುಕೊಳ್ಳಲು ಜಿಲ್ಲಾಡಳಿತ ಒಂದು ವ್ಯವಸ್ಥೆಯನ್ನೂ ಮಾಡಿಲ್ಲ ಎಂಬುದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಿಗ್ಗೆ ನಾಲ್ಕು ಗಂಟೆಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲಿ ಸೇನಾ ನೇಮಕಾತಿ ರ್ಯಾಲಿ ಆರಂಭವಾಗುತ್ತದೆ. ಇನ್ನೂ ಹತ್ತು ದಿನಗಳ ತನಕ ಈ ಸೇನಾ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಭುಜಂಗ ಪಾರ್ಕಿನಿಂದ ಸರಕಾರಿ ಆಸ್ಪತ್ರೆ ಉದ್ದಕ್ಕೂ ಹೊರ ರಾಜ್ಯದಿಂದ ಬಂದಿರುವ ಆಕಾಂಕ್ಷಿಗಳು ಮಲಗಿಕೊಂಡಿರುವ ದೃಶ್ಯ ಮಾರ್ಚ್ 18ರ ರಾತ್ರಿ ಕಂಡು ಬಂದಿದೆ. ಆದ್ರೆ, ಈ ಬಗ್ಗೆ ಜಿಲ್ಲಾಡಳಿತ ತಲೆ ಕೆಡಿಸಿಕೊಂಡಿಲ್ಲ. ಮುಂದಿನ ಹತ್ತು ದಿನಗಳೂ ಇವರು ಇಲ್ಲೇ ಮಲಗಬೇಕಾ? ಎಂಬ ಪ್ರಶ್ನೆ ಕಾಡುತ್ತಿದೆ.ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.