ಉಡುಪಿ :ಕಾಂಗ್ರೆಸ್ ಪಕ್ಷದ ಯುವ ಕಾಂಗ್ರೆಸ್ ನ ವತಿಯಿಂದ 2020-2021 ನೇ ಸಾಲಿನಲ್ಲಿ ಆನ್ಲೈನ್ ಮೂಲಕ ಯುವ ಕಾಂಗ್ರೇಸ್ ಪದಾಧಿಕಾರಿಗಳಿಗೆ ನಡೆದ ಆಂತರಿಕ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ವಡ್ಡರ್ಸೆ ಗ್ರಾಮದ ಅಜಿತ್ ಕುಮಾರ್ ಶೆಟ್ಟಿ ಅವರು ರಾಜ್ಯ ಯುವ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಅಜಿತ್ ಕುಮಾರ್ ಶೆಟ್ಟಿ ಅವರು 1231 ಮತಗಳನ್ನು ಪಡೆದು ಯುವ ಕಾಂಗ್ರೇಸ್ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದೆ. ವಡ್ಡರ್ಸೆ ಬೂತ್ ಕಾಂಗ್ರೇಸ್ ಅಧ್ಯಕ್ಷರಾಗಿ ಎಸ್. ಎಮ್. ಎಸ್ ಕಾಲೇಜು NSUI ಅಧ್ಯಕ್ಷರಾಗಿ ಕೋಟ ಬ್ಲಾಕ್ ಕಾಂಗ್ರೇಸ್ NSUI ಅಧ್ಯಕ್ಷರಾಗಿ ಹಾಗೆ ಯುವ ಇಂಟಕ್ (ಕಾರ್ಮಿಕ ಸಂಘಟನೆಯ ) ಅಧ್ಯಕ್ಷರಾಗಿ ಸೇವೆ ಸಲ್ಲಿರುತ್ತಾರೆ.ನೂತನವಾಗಿ ಯುವ ಕಾಂಗ್ರೇಸ್ ಕಾರ್ಯದರ್ಶಿ ಯಾಗಿರುವ ಅಜಿತ್ ಕುಮಾರ್ ಶೆಟ್ಟಿ ಅವರು ಯುವ ಕಾಂಗ್ರೇಸ್ ಸದಸ್ಯರಿಗೆ ಹಾಗೂ ರಾಷ್ಟ್ರೀಯ ಯುವ ಕಾಂಗ್ರೇಸ್ ಅಧ್ಯಕ್ಷರಾದ B. V ಶ್ರೀನಿವಾಸ್ ಅವರಿಗೆ ಹಾಗೂ ಕಾಂಗ್ರೇಸ್ ಪಕ್ಷದ ವರಿಷ್ಟರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವರದಿ : ದಿನೇಶ್ ರಾಯಪ್ಪನಮಠ






































