ಮಣಿಪಾಲ : ಹಸುವಿಗೆ ಬೈಕ್ ಡಿಕ್ಕಿ ಹೊಡೆದು ಹಸು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ಘಟನೆ ಎಂಡ್ ಪಾಯಿಂಟ್ ರಸ್ತೆಯಲ್ಲಿ ನಡೆದಿದೆ. ಸುಮಾರು ಜನ ಜಮಾಯಿಸುತಿದ್ದಂತೆ ಬೈಕ್ ಸವಾರ ಪರಾರಿಯಾಗಲು ಯತ್ನಿಸಿದ್ದು, ಆತನನ್ನು ಪೊಲೀಸರಿಗೆ ಹಿಡಿದು ಒಪ್ಪಿಸಲಾಯಿತು.
ಗೋವಿನ ಅಂತ್ಯ ಕ್ರಿಯೆಯನ್ನು ಸ್ಥಳೀಯರಾದ ನಗರಸಭಾ ಸದಸ್ಯ ಪ್ರಶಾಂತ್, ಪ್ರಾಣೇಶ್ ಪರ್ಕಳ,ನಿಖಿಲ್ ಮಡಿವಾಳ್ , ನಿತ್ಯಾನಂದ ಶೆಣೈ,ಗಣೇಶ್ ಪರ್ಕಳ, ಜೀವರಾಜ್ ಪರ್ಕಳ, ಪ್ರವೀಣ್ ಕೋಟ್ಯಾನ್ ಮೊದಲಾದವರು ಮಾಡಿದರು.
ಕಳೆದ 2 ತಿಂಗಳುಗಳಿಂದ ಈ ಭಾಗದಲ್ಲಿ ಇಂತಹ ಪ್ರಕರಣಗಳು ಜಾಸ್ತಿಯಾಗಿದೆ. ರಸ್ತೆ ಬದಿಯಲ್ಲಿ ಪೆಟ್ಟಾದ ಸ್ಥಿತಿಯಲ್ಲಿ ಗೋವುಗಳು ಪತ್ತೆಯಾಗುತ್ತಿದ್ದು, ಈ ಬಗ್ಗೆ ಪೊಲೀಸರಲ್ಲಿ ಸರಿಯಾದ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
Advertisement. Scroll to continue reading.





In this article:accident, cow death, Diksoochi news, diksoochi Tv, diksoochi udupi, manipal

Click to comment