ಬ್ರಹ್ಮಾವರ: ದೇವರು, ದೇವಸ್ಥಾನ, ಧರ್ಮಕ್ಷೇತ್ರಗಳ,ಗುರುಗಳ , ಧರ್ಮಾಧಿಕಾರಿಗಳ ಕುರಿತು ಕೆಟ್ಟದ್ದು ಮಾಡಿದವರಿಗಿಂತ ಕೆಟ್ಟ ಮಾತುಗಳನ್ನು ಆಡಿಕೊಂಡವರಿಗೆ ಹೆಚ್ಚು ಪಾಪಗಳು ಪ್ರಾಪ್ತಿಯಾಗುತ್ತದೆ ಎಂದು ಶ್ರೀಮದ್ ಜಗದ್ಗುರು ಆನೆಗೊಂದಿ ಮಹಾ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಹೇಳಿದರು.
ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಸಭಾ ಭವನದಲ್ಲಿ ಫೆಬ್ರವರಿಯಲ್ಲಿ ಜರುಗಿದ ಬ್ರಹ್ಮಕಲಶೋತ್ಸವದ ಅಂಗವಾಗಿ ಶನಿವಾರ ಧೃಡಕಲಶೋತ್ಸವದ ಬಳಿಕ ಬ್ರಹ್ಮಕಲಶೋತ್ಸವಕ್ಕೆ ಶ್ರಮಿಸಿದವರಿಗೆ ಕೃತಜ್ಞತಾ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತಾಡಿದರು. ಇಂದು ಎಲ್ಲಾ ಕಡೆಯಲ್ಲಿ ಸತ್ಯ ಸುದ್ದಿಗಳಿಗಿಂತ ಗಾಳಿಸುದ್ದಿಗಳಿಗೆ ಜನರು ಹೆಚ್ಚು ಮಹತ್ವ ನೀಡುತ್ತಿರುವುದು ಕಳವಳಕಾರಿಯಾಗಿದೆ ಎಂದರು.

ದೇವಸ್ಥಾನದ ಆಡಳಿತ ಮೋಕ್ತೇಸರ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಸಭೆಯ ಅಧ್ಯಕ್ಷತೆ ವಹಿಸಿ ದೇವಸ್ಥಾನದ ಜೀರ್ಣೋದ್ಧಾರ ಸೇರಿದಂತೆ ಎಲ್ಲಾ ರೀತಿಯಲ್ಲಿ ಸಹಕರಿಸಿದವರೀಗೆ ಕೃತಜ್ಞತೆ ಸಲ್ಲಿಸಿದರು.
ದೇವಸ್ಥಾನದ ತಂತ್ರಿಗಳಾದ ಲಕ್ಷ್ಮೀಕಾಂತ ಶರ್ಮ ಮತ್ತು ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಜನಾರ್ಧನ ಆಚಾರ್ಯ ಚೇಂಪಿಯವರನ್ನು ಸ್ವಾಮೀಜಿಯವರು ಸನ್ಮಾನಿಸಿದರು.

2 ನೇ ಆಡಳಿತ ಮೋಕ್ತೇಸರ ಪ್ರವೀಣ ಆಚಾರ್ಯ ರಂಗನಕೆರೆ, 3ನೇ ಮೋಕ್ತೇಸರ ರವಿ ಆಚಾರ್ಯ ಕೆಳಾರ್ಕಳ ಬೆಟ್ಟು, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಪಿ.ವಿ. ಗಂಗಾಧರ ಆಚಾರ್ಯ ,ವೇದ ಮೂರ್ತಿ ವೀರರಾಘವ ಶರ್ಮ , ಆಡಳಿತ ಸಮಿತಿಯ ಅರವಿಂದ ಆಚಾರ್ಯ ಬೆಳ್ಳಂಪಳ್ಳಿ ,ಸೌಮ್ಯ ಸುರೇಶ್ ಆಚಾರ್ಯ ಉಪಸ್ಥಿತರಿದ್ದರು.
ಕೋಟ ಚಂದ್ರ ಶೇಖರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಟಿ.ಜಿ ಆಚಾರ್ಯ ವಂದಿಸಿದರು.
ವರದಿ : ಬಿ.ಎಸ್.ಆಚಾರ್ಯ





































