ಉಡುಪಿ : ಹೋಪ್ ಇಂಡಿಯಾ ಫೌಂಡೇಶನ್ ನ ಲಾಂಛನ ಅನಾವರಣಾ ಕಾರ್ಯಕ್ರಮವು ಮಣಿಪಾಲ್ ಇನ್ ಹೋಟೇಲ್ ಮತ್ತು ಕನ್ವೆನ್ಶನ್ ಸೆಂಟರ್ ಕರಾವಳಿ ಬೈಪಾಸ್ ಉಡುಪಿಯಲ್ಲಿ ನಡೆಯಿತು. ಲಾಂಛನವನ್ನು ಉಡುಪಿ ತಾಲೂಕು ತಹಶಿಲ್ದಾರರಾದ ಪ್ರದೀಪ್ ಕುರುಡೇಕರ್ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಮತ್ತು ಖ್ಯಾತ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಉಪಸ್ಥಿತರಿದ್ದರು.
ಈ ಸಂದರ್ಭ ಸಮಾಜ ಸೇವಕ ಅಮೃತ್ ಶೆಣೈ, ತೋನ್ಸೆ ಹೆಲ್ತ್ ಸೆಂಟರ್ ನ ಬಿ.ಎಮ್, ಜಾಫರ್ ತೋನ್ಸೆ, ಪತ್ರಕರ್ತರಾದ ಸ್ಟಿವನ್ ಕೊಲೊಸೋ ಹಾಗೂ ಕಾರ್ತಿಕ್ ಕುಂದರ್ ಉಪಸ್ಥಿತರಿದ್ದರು. ಹೋಪ್ ಇಂಡಿಯಾ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷ ಅನ್ಸಾರ್ ಅಹ್ಮದ್ ಸ್ವಾಗತಿಸಿದರು.