ಮಧ್ಯ ಪ್ರದೇಶ : ಅಜ್ಜ ಹಾಗೂ ಚಿಕ್ಕಪ್ಪನಿಂದ 6 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ.
ಸಮೋಸ ಕೊಡಿಸುವ ನೆಪದಲ್ಲಿ ಬಾಲಕಿ ಹಾಗೂ ಆಕೆಯ ಅಂಬೆಗಾಲಿಡುತ್ತಿರುವ ತಮ್ಮನನ್ನು ತಮ್ಮ ಮನೆಗೆ ಕರೆಸಿಕೊಂಡ ಚಿಕ್ಕಪ್ಪ ಬಾಲಕಿ ಮೇಲೆ ಅತ್ಯಾಚಾರ ಎಸಗಿಸಿದ್ದಾನೆ. ಜೊತೆಗೆ ಅಜ್ಜನೂ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಬಾಲಕಿಯ ಅಜ್ಜ ಹಾಗೂ ಚಿಕ್ಕಪ್ಪ ಆಕೆಯ ಮೇಲೆ ಅತ್ಯಾಚಾರವೆಸಗಿ ಬಳಿಕ ಯಾರಿಗೂ ತಿಳಿಸದಂತೆ 20 ರೂ. ನೀಡಿದ್ದರು ಎಂದು ತಿಳಿದು ಬಂದಿದೆ.

ಮನೆಗೆ ಬಂದ ಬಾಲಕಿ ನೋವಿನಿಂದ ನರಳಿದ್ದು, ಇದನ್ನು ಗಮನಿಸಿದ ತಾಯಿ ಬಾಯಿ ಬಿಡಿಸಿದ್ದಾರೆ. ಬಳಿಕ ಅಜ್ಜ ಹಾಗೂ ಚಿಕ್ಕಪ್ಪ ಮಾಡಿರುವ ಕುಕೃತ್ಯದ ಬಗ್ಗೆ ಬಾಲಕಿ ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ.



Advertisement. Scroll to continue reading.

In this article:Bhopal, Diksoochi news, diksoochi Tv, diksoochi udupi, madhyapradesh, rape

Click to comment