Connect with us

Hi, what are you looking for?

Diksoochi News

Uncategorized

ರಾಷ್ಟ್ರ ಪ್ರಶಸ್ತಿ ವಿಜೇತೆ ನಿರ್ದೇಶಕಿ ಸುಮಿತ್ರ ಭಾವೆ ಇನ್ನಿಲ್ಲ

0

ಖ್ಯಾತ ನಿರ್ದೇಶಕಿ ಸುಮಿತ್ರಾ ಭಾವೆ ವಿಧಿವಶರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂಧಿಸದೆ ಇಂದು ಬೆಳಿಗ್ಗೆ ಪುಣೆಯಲ್ಲಿ ವಿಧಿವಶರಾಗಿದ್ದಾರೆ.

ಮರಾಠಿ ಚಿತ್ರರಂಗದ ಖ್ಯಾತ ನಿರ್ದೇಶಕಿ,ಬರಹಗಾರ್ತಿ ಸುಮಿತ್ರ ಭಾವೆ ಸಿನಿಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದವರು. ನಿರ್ದೇಶಕ ಸುಕ್ತಂಕರ ಮತ್ತು ಸುಮಿತ್ರಾ ಭಾವೆ ಜೋಡಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕಾಸವ್, ಅಸ್ತು, ದಹವಿ ಫಾ, ದೇವ್ರೈ, ಸಂಹಿತಾ, ವೆಲ್ಕಮ್ ಹೋಮ್, ವಾಸ್ತು ಪುರುಷ್ ಚಿತ್ರಗಳು ಸೂಪರ್ ಹಿಟ್ ಆಗಿವೆ. ಕಾಸನ್ ಚಿತ್ರಕ್ಕೆ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಸಿನಿಮಾವಾಗಿ ಹೊರಹೊಮ್ಮಿ, ಸ್ವರ್ಣಕಮಲ ಪಡೆದಿದೆ.

ಸುಮಿತ್ರಾ ಭಾವೆ ನಿಧನಕ್ಕೆ ಚಿತ್ರರಂಗದ ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!