ನವದೆಹಲಿ : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ರವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಕೋವಿಡ್ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದಕ್ಕೂ ಮೊದಲು ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿ ಅವರಿಗೆ ಲಸಿಕೆ ಕಾರ್ಯಕ್ರಮ, ಔಷಧಗಳ ಪೂರೈಕೆಯ ಹೆಚ್ಚಳ ಸೇಋಇದಂತೆ ಕೋವಿಡ್ ಬಿಕ್ಕಟ್ಟಿನ ಹೋರಾಟ ಎದುರಿಸಲು ಐದು ಪ್ರಮುಖ ಕ್ರಮಗಳ ಸಲಹೆಗಳನ್ನು ನೀಡಿ ಪತ್ರವನ್ನು ಬರೆದಿದ್ದರು.