ಟಾಲಿವುಡ್ ನತ್ತ ನಜ್ರಿಯಾ; ಯಾರ ಜೊತೆ ಮೊದಲ ತೆಲುಗು ಚಿತ್ರ ಗೊತ್ತಾ?
Published
0
ಮಲಯಾಳಂ ಚಿತ್ರರಂಗದಲ್ಲಿ ಹಿಟ್ ಚಿತ್ರಗಳನ್ನು ನೀಡಿರುವ ನಟಿ ನಜ್ರಿಯಾ ನಝಿಮ್. ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ. ಇದೀಗ ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದಾರೆ.
ಹೌದು, ಇದೇ ಮೊದಲ ಬಾರಿಗೆ ತೆಲುಗು ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಜ್ರಿಯಾ. ಅದೂ ತೆಲುಗಿನ ನ್ಯಾಚುರಲ್ ಸ್ಟಾರ್ ಜೊತೆ. ನಾನಿ ಜೊತೆ ‘ಅಂತೆ ಸುಂದರನಿಕಿ’ ಚಿತ್ರದಲ್ಲಿ ನಜ್ರಿಯಾ ನಟಿಸುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ ನಟಿ.