Connect with us

Hi, what are you looking for?

Diksoochi News

Uncategorized

ದುಬೈ: ಬುರ್ಜ್ ಖಲೀಫಾದಲ್ಲಿ ಭಾರತದ ತ್ರಿವರ್ಣ ಧ್ವಜ; ಸ್ಟೇ ಸ್ಟ್ರಾಂಗ್ ಅಂದ ಯುಎಇ

0

ದುಬೈ : ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆ ಕಂಡು ಬರುತ್ತಿದೆ. ಈ ಆತಂಕಕಾರಿ ಬೆಳವಣಿಗೆಯ ನಡುವೆ ಯುಎಇ ಕೊರೋನಾ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದೆ ಅದೂ ಹೇಗೆ ಗೊತ್ತಾ? ದೇಶದ ಪ್ರಮುಖ ಕಟ್ಟಡಗಳ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಮೂಡಿಸುವ ಮೂಲಕ. ವಿದ್ಯುತ್ ದೀಪಗಳಿಂದ ತ್ರಿವರ್ಣ ಧ್ವಜವನ್ನು ಪ್ರತಿಬಿಂಬಿಸಿದೆ, ಈ ಮೂಲಕ ಸ್ಟೇ ಸ್ಟ್ರಾಂಗ್ ಇಂಡಿಯಾ ಎಂಬ ಸಂದೇಶವನ್ನು ಭಾನುವಾರ ರಾತ್ರಿ ಬಿತ್ತರಿಸಿದೆ.

ಈ ಬಗ್ಗೆ ಯುಎಇ ಭಾರತೀಯ ರಾಯಭಾರ ಕಚೇರಿ ಟ್ವಿಟ್ಟರ್ ನಲ್ಲಿ ವೀಡಿಯೋ ಹಂಚಿಕೊಂಡಿದೆ. ಭಾರತ ಕೊರೋನಾ ವಿರುದ್ಧ ಹೋರಾಡುತ್ತಿದ್ದು, ಭಾರತದೊಂದಿಗೆ ಸ್ನೇಹ ಸೌಹಾರ್ದಯುತ ರಾಷ್ಟ್ರವಾಗಿರುವ ಯುಎಇ ಭಾರತಕ್ಕೆ ಹಾರೈಸುತ್ತಿದೆ. ಭಾರತಕ್ಕೆ ನಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಬುರ್ಜ್ ಖಲೀಫಾದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಬೆಳಕಿನ ಮೂಲಕ ಮೂಡಿಸಲಾಗಿದೆ ಎಂದು ಯುಎಇ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಯುಎಇಯಲ್ಲಿನ ಭಾರತೀಯ ರಾಯಭಾರಿ ಪವನ್ ಕಪೂರ್, ಇಂತ ಕಷ್ಟದ ಸಮಯದಲ್ಲಿ ಯುಎಇ ತನ್ನ ಬೆಂಬಲ ವ್ಯಕ್ತಪಡಿಸಿರುವುದನ್ನು ಭಾರತ ಪ್ರಶಂಸಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!