ಚಂದನವನ : ಸಿನಿಮಾ ರಂಗ ಬಳಿಕ ರಾಜಕೀಯ ಹೀಗೆ ಸದ್ದು ಮಾಡಿದ್ದ ರಮ್ಯಾ ಇದೀಗ ಎಲ್ಲಿಯೂ ಕಾಣಿಸುತ್ತಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಇದೀಗ ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳೊಂದಿಗೆ ರಮ್ಯಾ ಸಂವಾದ ನಡೆಸಿದ್ದಾರೆ.
ಸಿನಿಮಾ ಇಲ್ಲ, ರಾಜಕೀಯವೂ ಇಲ್ಲ
ಅಭಿಮಾನಿಯೊಬ್ಬರು, ನಿಮ್ಮನು ಸಿನಿಮಾದಲ್ಲಿ ಯಾವಾಗ ನೋಡೋದು? ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಮ್ಯಾ, ನನ್ನ ಸಿನಿಮಾ ಜರ್ನಿ ಮುಗಿದು ಬಹಳ ಕಾಲವಾಯ್ತು. ಆ ನಾವೆ ನನ್ನಿಂದ ಬಹುದೂರ ಸಾಗಿದೆ ಎನ್ನುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಹಾಗಾಗಿ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರುತ್ತಾರೆಂದು ಕಾದಿದ್ದ ಫ್ಯಾನ್ಸ್ ಗೆ ಬೇಸರವಾಗಿದೆ. ರಾಜಕೀಯದಲ್ಲಿ ಫುಲ್ ಟೈಮ್ ತೊಡಗಿಸಿಕೊಳ್ಳುವ ಯೋಚನೆ ಇದೆಯಾ? ಎಂಬ ಪ್ರಶ್ನೆಗೆ, ಇಲ್ಲ, ರಾಜಕೀಯದಲ್ಲಿರೋಲ್ಲ ಎಂದಿದ್ದಾರೆ.

ರಕ್ಷಿತ್ ಶೆಟ್ಟಿನಾ ಮದುವೆ ಆಗಿ..
ಅಭಿಮಾನಿಗಳು ರಮ್ಯಾ ಮದುವೆಯ ಬಗ್ಗೆ ಸಾಲು ಸಾಲು ಪ್ರಶ್ನೆಗಳನ್ನು ಇತ್ತಿದ್ದಾರೆ. ನಿಮಗೆ ಮದ್ವೆ ಆಗಿದೆಯಾ? ಡೇಟಿಂಗ್ ಮಾಡ್ತಿದ್ದೀರಾ ಎಂಬ ಪ್ರಶ್ನೆಗೆ ಇಲ್ಲ ಎಂದಿದ್ದಾರೆ ರಮ್ಯಾ…ಮದ್ವೆ ಆದೋರು ಖುಷಿಯಾಗಿರಲ್ಲ ಎಂದಿದ್ದಾರೆ. ನೀವ್ಯಾಕೆ ರಕ್ಷಿತ್ ಶೆಟ್ಟಿನಾ ಮದ್ವೆ ಆಗ್ಬಾರ್ದು ಎಂದು ಒಬ್ಬ ಅಭಿಮಾನಿ ಹೇಳಿದ್ದು, ರಮ್ಯಾ ರಕ್ಷಿತ್ ಶೆಟ್ಟಿಯನ್ನು ಟ್ಯಾಗ್ ಮಾಡಿ, ನಗುವ ಇಮೋಜಿ ಹಾಕಿದ್ದಾರೆ.

ರಕ್ಷಿತ್ ಫಸ್ಟ್ ಕ್ರಶ್ ರಮ್ಯಾ
ರಕ್ಷಿತ್ ಶೆಟ್ಟಿ ಈ ಹಿಂದೆ ರಮ್ಯಾ ತನ್ನ ಫಸ್ಟ್ ಸೆಲೆಬ್ರಿಟಿ ಕ್ರಶ್ ಎಂದು ಹೇಳಿದ್ದರು. ರಮ್ಯಾ ಅವನೇ ಶ್ರೀಮನ್ನಾರಾಯಣ ಟ್ರೈಲರ ನೋಡಿ ಮೆಚ್ಚಿಕೊಂಡು ಹೊಗಳಿದ್ದರು. ಈಗ ಅಭಿಮಾನಿ ಈ ಪ್ರಶ್ನೆ ಇತ್ತಿದ್ದು, ರಕ್ಷಿತ್ ಏನೆನ್ನುತ್ತಾರೆ ನೋಡಬೇಕಾಗಿದೆ.



