Connect with us

Hi, what are you looking for?

Diksoochi News

Uncategorized

ಐಪಿಎಲ್ : ಹೈದರಾಬಾದ್ ಮಣಿಸಿ ಮೊದಲ ಸ್ಥಾನಕ್ಕೇರಿದ ಸೂಪರ್ ಕಿಂಗ್ಸ್; 7 ವಿಕೆಟ್ ಗಳ ಭರ್ಜರಿ ಜಯ

0

ನವದೆಹಲಿ : ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಅರುಣ್ ಜೇಟ್ಲಿ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಗೆದ್ದಿದೆ. ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಜೊತೆಯಾಟ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಹೈದರಾಬಾದ್ ಟೀಂ ನಿಗದಿತ 20 ಓವರ್ ಗಳಲ್ಲಿ 171 ರನ್ ಗಳಿಸಿತು. ಗುರಿ ಸಾಧಿಸಲು ಹೊರಟ ಸೂಪರ್ ಕಿಂಗ್ಸ್ 18.3 ಓವರ್ ಗಳಲ್ಲಿ 3 ವಿಕೆಟ್ ಕಳಕೊಂಡು 173 ರನ್ ಗಳಿಸಿ ಜಯಭೇರಿ ಭಾರಿಸಿತು.

ಅಗ್ರಸ್ಥಾನಕ್ಕೇರಿದ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್ 6 ರಲ್ಲಿ 5 ಪಂದ್ಯ ಗೆದ್ದು 10 ಪಾಯಿಂಟ್ಸ್ ಪಡೆದು ಅಗ್ರಸ್ಥಾನಕ್ಕೇರಿದರೆ, ಸನ್ ರೈಸರ್ಸ್ ಹೈದರಾಬಾದ್ 6 ಪಂದ್ಯಗಳಲ್ಲಿ 5 ಪಂದ್ಯ ಸೋತು ಕೊನೆ ಸ್ಥಾನ ಅಲಂಕರಿಸಿದೆ. 2ನೇ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, 4 ನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡಗಳಿವೆ. ಮೇ 1 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೆಣಸಾಡಲಿದೆ. ಹೈದರಾಬಾದ್ ಮೇ 2 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!