ವಾಷಿಂಗ್ಟನ್ : ವಿಶ್ವ ಕಂಡ ಶ್ರೇಷ್ಠ ಉದ್ಯಮಿ, ಕೊಡುಗೈ ದಾನಿ ಎಂದೆನಿಸಿಕೊಂಡಿರುವ ಬಿಲ್ ಗೇಟ್ಸ್ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ. ಸುಮಾರು 27 ವರ್ಷಗಳ ದಾಂಪತ್ಯ ಜೀವನ ವಿಚ್ಛೇದನದ ಮೂಲಕ ಕೊನೆಗೊಳ್ಳಲಿದೆ. 67 ವರ್ಷದ ಬಿಲ್ ಗೇಟ್ಸ್ ಹಾಗೂ ಅವರ ಪತ್ನಿ 56 ವರ್ಷದ ಮಿಲಿಂದಾ ಪರಸ್ಪರ ಸಹಮತಿಯಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಬಿಲಿಗೇಟ್ಸ್ ಟ್ವೀಟ್ ಮೂಲಕ ದೃಢ ಪಡಿಸಿದ್ದಾರೆ.
ಪತಿ-ಪತ್ನಿ ಇಬ್ಬರೂ ಸೇರಿ ಸ್ಥಾಪಿಸಿರುವ ಫೌಂಡೇಷನ್ ಮೂಲಕ ವಿಶ್ವದೆಲ್ಲೆಡೆ ಸಾಮಾಜಿಕ ಕಳಕಳಿ ಕಾರ್ಯ ನಡೆಸುತ್ತಿದೆ. ಅಪಾರ ದಾನಗಳನ್ನೂ ಮಾಡಿದ್ದಾರೆ.
ನ್ಯೂಯಾರ್ಕ್ ಟ್ರೇಡ್ ಶೋನಲ್ಲಿ ಮೊದಲ ಭಾರಿ ಭೇಟಿಯಾಗಿದ್ದ ಅವರಿಬ್ಬರು, 1994 ರಲಿ ಮದುವೆಯಾಗಿದ್ದರು. ಇವರಿಗೆ ಮೂವರು ಮಕ್ಕಳಿದ್ದಾರೆ.