ವರದಿ : ದಿನೇಶ್ ರಾಯಪ್ಪನಮಠ
ಕೋಟ: ಹಿಂದೂ ಧರ್ಮದಾಯದತ್ತಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಕೋಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವನಾಥ ಇವರೊಂದಿಗೆ ಚರ್ಚೆ ನಡೆಸಿ ಪ್ರಸ್ತುತ ಕೋವಿಡ್ ಸಮಸ್ಯೆಯಿಂದ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರಲ್ಲದೆ ಆಸ್ಪತ್ರೆಗಳಲ್ಲಿನ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಪ್ರಸ್ತುತ ಕುಂದಾಪುರದಲ್ಲಿನ ಹೆರಿಗೆ ಆಸ್ಪತ್ರೆಯನ್ನು ಕೋಟ ಸಮುದಾಯ ಆರೋಗ್ಯಕ್ಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು ಅದರಂತೆ ಕುಂದಾಪುರ ತಾಲೂಕು ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡುಗೊಳಿಸಲಾಗಿದೆ ಈ ಹಿನ್ನಲ್ಲೆಯಲ್ಲಿ ಕೋಟದಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚಿಸಲು ಹಾಗೂ ಮಕ್ಕಳ ತಜ್ಞರ ಕೊರತೆಯನ್ನು ನೀಗಿಸಲು ಕ್ರಮಕೈಗೊಳ್ಳಲಾಗುವುದು. ಆಸ್ಪತ್ರೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸ್ಥಳೀಯ ಪಂಚಾಯತ್ ಮಟ್ಟದಲ್ಲಿ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.ಕೋವಿಡ್ ಸಮಸ್ಯೆಯ ಹಿನ್ನಲ್ಲೆಯಲ್ಲಿ ಆಕ್ಸಿಜನ್ ಕೊರತೆ ಕುರಿತಂತೆ ಪ್ರಸ್ತುತ ಸ್ಥಿತಿಯಲ್ಲಿ ಇಲ್ಲಿ ಯಾವುದೆ ಕೊರತೆ ಇಲ್ಲ ಅಂತಹ ಸಂದರ್ಭದಲ್ಲಿ ಸ್ಥಳೀಯ ಜಿಲ್ಲಾ ಆರೋಗ್ಯ ಅಧೀಕ್ಷಕರ ಮೂಲಕ ಮಾಹಿತಿ ಪಡೆದು ಬಗೆಹರಿಸಲಾಗುವುದು ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಸಮುದಾಯ ಆಸ್ಪತ್ರೆಯ ಭೇಟಿ ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಿದ ರೀತಿಗಳನ್ನು ಹಾಗೂ ಅದನ್ನು ಬಗೆಹರಿಸುವ ಭರವಸೆಯನ್ನು ಅಲ್ಲಿಗೆ ಅನಾರೋಗ್ಯ ಪೀಡಿತರು ಪ್ರಶಂಸಿದರಲ್ಲದೆ ಸರಕಾರದ ಪ್ರತಿನಿಧಿಯಾಗಿ ಆರೋಗ್ಯ ಇಲಾಖೆಗೆ ಆಗಾಗ ಭೇಟಿ ನೀಡುವ ಪರಿಯನ್ನು ಕೊಂಡಾಡಿದರು.

ಈ ಸಂದರ್ಭದಲ್ಲಿ ಕೋಟ ಸಮುದಾಯ ಆರೋಗ್ಯ ಕೇಂದ್ರದ ಅರವಳಿಕೆ ತಜ್ಞ ಡಾ.ಸಂದೀಪ್ ಕುಮಾರ್ ಶೆಟ್ಟಿ, ದಂತವೈದ್ಯೆ ಡಾ.ಅನಾಲಿನಿ,ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಉಪಾಧ್ಯಕ್ಷೆ ಜಯಂತಿ ಪೂಜಾರಿ, ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ,ಸದಸ್ಯರಾದ ಭುಜಂಗ ಗುರಿಕಾರ, ಚಂದ್ರ ಪೂಜಾರಿ, ಸಂತೋಷ್ ಪ್ರಭು, ವನೀತಾ ಶ್ರೀಧರ ಆಚಾರ್ಯ, ಗುಲಾಬಿ ಪೂಜಾರಿ,ರತ್ನರಮೇಶ್ ಮತ್ತಿತರರು ಉಪಸ್ಥಿತರಿದ್ದರು.





































