Connect with us

Hi, what are you looking for?

Diksoochi News

Uncategorized

ಬೈಂದೂರು : ಕ್ಲೋಸ್ ಡೌನ್ ಇದ್ರೂ ಅನಗತ್ಯ ವಾಹನಗಳ ಓಡಾಟ; ಕೈಮುಗಿದು ಬುದ್ಧಿವಾದ ಹೇಳುತ್ತಿರುವ ಪೊಲೀಸರು

0

ಬೈಂದೂರು : ಕೊರೋನಾ ಹಾವಳಿ ಹೆಚ್ಚಾಗಿದೆ. ಕಟ್ಟು ನಿಟ್ಟಿನ ಕ್ರಮ ಒಂದೆಡೆ ತೆಗೆದುಕೊಳ್ಳಲಾಗಿದೆ. ಆಮ್ಲಜನಕದ ಲಭ್ಯತೆ ಇಲ್ಲದೆ ಜನ ಸಾಯುತ್ತಿದ್ದಾರೆ. ಆದರೂ ಜನರು ಎಚ್ಚೆತ್ತುಕೊಂಡಿಲ್ಲ. ಬೈಂದೂರಿನಲ್ಲಿ ಕ್ಲೋಸ್ ಡೌನ್ ಇದ್ರೂ ಜಿಲ್ಲೆಯಲ್ಲಿ ಅನಗತ್ಯ ವಾಹನಗಳು ಓಡಾಟ ನಡೆಸುತ್ತಿವೆ. ಸಣ್ಣ ಪುಟ್ಟ ಕಾರಣಗಳನ್ನು ಹೇಳಿಕೊಂಡು ವಾಹನ ಸವಾರರು ಹೋಗುತ್ತಿರುವ ದೃಶ್ಯ ಕಂಡುಬರುತ್ತಿದೆ. ದಯವಿಟ್ಟು ಅನಗತ್ಯ ಓಡಾಟ ಮಾಡಬೇಡಿ, ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ ಎಂದು ಕೈ ಮುಗಿದು ಟ್ರಾಫಿಕ್ ಪೊಲೀಸ್ ಎಸ್ ಐ ಕೈಮುಗಿದು ಹೇಳುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಜನರಲ್ಲಿ ವಿನಂತಿ ಮಾಡುತ್ತಿದ್ದಾರೆ. ಪ್ರಮುಖ ರಸ್ತೆಯಲ್ಲಿ ಬ್ಯಾರಿಗೇಟ್ ಹಾಕಿ ವಾಹನಗಳನ್ನು ತಡೆಯುವ ಕೆಲಸ ಮಾಡುತ್ತಿದ್ದಾರೆ.

ಇನ್ನೊಂದೆಡೆ ಬೈಂದೂರು ಸಂತೆ ಮಾರ್ಕೆಟ್ ನಲ್ಲಿ ಜನಜಂಗುಳಿಯೇ ಸೇರಿದೆ. ಬೈಂದೂರು ಸಂತೆಯಲ್ಲಿ ಗ್ರಾಹಕರಿಗೆ ಮತ್ತು ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ. ಪೊಲೀಸರು ಸರ್ಕಾರದ ನಿಯಮ ಪಾಲಿಸಲು ಸೂಚನೆ ನೀಡುತ್ತಿದ್ದಾರೆ. ಇನ್ನು ಬೈಂದೂರು ಪೊಲೀಸರು ಸಂತೆಯಲ್ಲಿ ಮಾಸ್ಕ್ ಹಾಕದವರಿಗೆ ದಂಡವನ್ನು ವಿಧಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!