ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ಗಾಯಕ ಜಿ.ಆನಂದ್ ವಿಧಿವಶರಾಗಿದ್ದಾರೆ. ಅವರಿಗೆ ಕೊರೋನಾ ಸೋಂಕು ತಗುಲಿತ್ತು. 67 ವರ್ಷದ ಆನಂದ್ ಅವರ ಆಕ್ಸಿಜನ್ ಪ್ರಮಾಣ 55ಕ್ಕೆ ಇಳಿಕೆಯಾಗಿತ್ತು. ಆಕ್ಸಿಜನ್ ಹಾಗೂ ವೆಂಟಿಲೇಟರ್ ಗಾಗಿ ಅವರ ಸನಹಿತರೂ ಸೋಶಿಯಲ್ ಮೀಡಿಯಾದಲ್ಲಿಯೂ ಮನವಿ ಮಾಡಿದ್ದರು, ವೆಂಟಿಲೇಟರ್ ಸಿಗುವ ವೇಳೆಗೆ ಅವರು ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ.
ಆನಂದ್, ಅಮೆರಿಕ ಅಮ್ಮಾಯಿ ಚಿತ್ರದ ಮೂಲಕ 1976ರಲ್ಲಿ ಸಿನಿರಂಗ ಪ್ರವೇಶಿಸಿದ್ದರು. ಬಳಿಕ ಅನೇಕ ಚಿತ್ರಗೀತೆಗಳನ್ನು ಹಾಡಿದ್ದಾರೆ. ಸ್ವರ ಮಾಧುರಿ ಸಂಗೀತ ತಂಡ ಕಟ್ಟಿ, ಆ ಮೂಲಕ ಪ್ರಪಂಚದಾದ್ಯಂತ ಸಾಕಷ್ಟು ಲೈವ್ ಶೋ ಕೊಟ್ಟಿದ್ದಾರೆ.
Advertisement. Scroll to continue reading.