ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಲಾಕ್ ಡೌನ್ ಹಿನ್ನೆಲೆಯಲ್ಲಿ ಸರೋವರದಲ್ಲಿನ ಜಲಚರಗಳು ಕೂಡಾ ಆಹಾರ ಇಲ್ಲದೆ ಸಾಯಬಾರದು ಎನ್ನುವ ದ್ರಷ್ಡಿಯಲ್ಲಿ ಬ್ರಹ್ಮಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ಸರೊವರಕ್ಕೆ ಇಲ್ಲಿನ ಪೊಲೀಸ್ ಅಧಿಕಾರಿ ಶಾಂತಾರಾಜ್ ಪ್ರತಿದಿನ ಆಹಾರ ಹಾಕಿ ಗಮನಸೆಳೆಯುತ್ತಿದ್ದಾರೆ. ಬ್ರಹ್ಮಾವರ ಪೋಲೀಸ್ ಠಾಣೆಯಲ್ಲಿ ಪಿ.ಎಸ್ ಐ ಹುದ್ದೆಯಲ್ಲಿರುವ ಶಾಂತರಾಜ್ ಉತ್ತಮ ಗಾಯಕರಾಗಿ ಗುರುತಿಸಿಕೊಂಡ ಪ್ರತಿಭೆ. ಜೊತೆಗೆ ಪ್ರತಿ ಸೋಮವಾರ ಇಲ್ಲಿನ ದೇವಸ್ಥಾನಕ್ಕೆ ಬಂದು ಹೋಗುವ ಪರಿಪಾಠ ದ ಜೊತೆ ಸರೋವರದಲ್ಲಿನ ಜಲಚರಗಳಿಗೆ ಆಹಾರವನ್ನು ಹಾಕಿಹೋಗುತ್ತಿದ್ದರು. ಇವರಂತೆ ಅನೇಕ ಭಕ್ತರು ಕೂಡಾ ಇಲ್ಲಿನ ಸರೋವರ ದ ಜಲಚರಗಳಿಗೆ ಆಹಾರ ಹಾಕುವ ಪರಿಪಾಠ ಇತ್ತು. ಆದರೆ, ಇದೀಗ ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ಇಲ್ಲದೆ ಇರುವುದರಿಂದ ಆಹಾರ ಇಲ್ಲದೆ ಸಾಯುವ ಸ್ಥಿತಿ ಬರಬಾರದು ಎನ್ನುವ ದೃಷ್ಟಿಯಲ್ಲಿ ಇವರು ಪ್ರತೀ ದಿನ ಡ್ಯೂಟಿಗೆ ಹೋಗುವ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಸರೋವರದ ಜಲಚರಗಳಿಗೆ ಆಹಾರ ಹಾಕಿದ ಬಳಿಕ ಮುಂದಿನ ಸರಕಾರಿ ಕೆಲಸಕ್ಕೆ ತೆರಳುತ್ತಾರೆ. ಕೋವಿಡ್ ವಾರಿಯರ್ಸ್ ಆಗಿರುವ ಬಿಡುವಿರದ ಕೆಲಸದ ಒತ್ತಡದ ನಡುವೆಯೂ ಪೋಲೀಸ್ ಇಲಾಖೆಯಲ್ಲಿ ಇದ್ದು ಈ ರೀತಿಯಲ್ಲಿ ಒಂದು ಸಮಾಜಮುಖಿ ಕೆಲಸ ಮಾಡಿ ಮಾದರಿಯಾಗಿದ್ದಾರೆ


































