Connect with us

Hi, what are you looking for?

Diksoochi News

Uncategorized

ಮಂಗಳೂರು : 7 ತಿಂಗಳ ಗರ್ಭಿಣಿ ಪೊಲೀಸ್ ಅಧಿಕಾರಿ ಕೊರೋನಾ ಸೋಂಕಿನಿಂದ ಸಾವು

0

ಮಂಗಳೂರು : ಕೋಲಾರ ಮೂಲದ 7 ತಿಂಗಳ ಗರ್ಭಿಣಿ ಪೊಲೀಸ್ ಅಧಿಕಾರಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಶಾಮಿಲಿ(24) ಮೃತ ಮಹಿಳಾ ಪೊಲೀಸ್ ಅಧಿಕಾರಿ. ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಅವರು ಸೇವೆ ಸಲ್ಲಿಸುತ್ತಿದ್ದರು. 2021ರ ಜನವರಿ 2021ರ ಜನವರಿ 11ರಂದು ದ.ಕ.ಜಿಲ್ಲಾ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದ ಅವರು, ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ರಜೆಯ ಮೇಲೆ ತನ್ನ ಸ್ವಂತ ಊರಾದ ಕೋಲಾರಕ್ಕೆ ತೆರಳಿದ್ದರು.

ಊರಲ್ಲಿ ಕೊರೋನಾ ಸೋಂಕು ತಗುಲಿದ್ದು, ಕೊಲಾರದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಿಗ್ಗೆ 4.30 ರ ವೇಳೆಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗರ್ಭಿಣಿಯಾಗಿದ್ದ ಕಾರಣ ಶಾಮಿಲಿಯವರು ಕೊರೋನ ಲಸಿಕೆ ಪಡೆದಿರಲಿಲ್ಲ ಎನ್ನಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!