ಬೆಂಗಳೂರು : 1250 ಕೋ.ರೂ. ಆರ್ಥಿಕ ಪ್ಯಾಕೇಜ್ ನೀಡಲು ನಿರ್ಧರಿಸಿದ್ದೇವೆ. ಹೂ ಬೆಳೆಗಾರರಿಗೆ ಪ್ರತೀ ಹೆಕ್ಟೇರ್ ಗೆ 10,000 ಸಹಾಯಧನ ನೀಡಲಿದ್ದೇವೆ. ಹಣ್ಣು, ತರಕಾರಿ ಬೆಳೆಗಾರರಿಗೂ ೧ ಹೆಕ್ಟೇರ್ ಗೆ 10,000 ಸಹಾಯ ಧನ ನೀಡಲು ನಿರ್ಧರಿಸಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು, ಲೈಸನ್ಸ್ ಹೊಂದಿರುವ, ರಿಜಿಸ್ಟ್ರೇಷನ್ ಆಗಿರುವ
ಆಟೋ, ಟ್ಯಾಕ್ಸ್, ಕ್ಯಾಬ್ ಚಾಲಕರಿಗೆ 3,000, ಕಟ್ಟಡ ಕಾಮಗಾರರಿಗೆ 3000 ರೂ.,
ಅಸಂಘಟಿತ ಕಾರ್ಮಿಕರಿಗೆ ತಲಾ ಎರಡು ಸಾವಿರ,
ಚಮ್ಮಾರರು, ಕಮ್ಮಾರರು,
ಬೀದಿ ಬದಿ ವ್ಯಾಪಾರಿಗಳಿಗೆ ತಲಾ 2,000 ರೂ,
ಕಲಾವಿದರು, ತಂಡಗಳಿಗೆ ತಲಾ 3,000 ಸಹಾಯಧನ ವಿತರಿಸಲಾಗುವುದು ಎಂದರು.
ಸಂಘ- ಸಂಸ್ಥೆಗಳ ಸಾಲ ಮರುಪಾವತಿಗೆ ಅವಧಿ ವಿಸ್ತರಣೆ
ರೈತರು, ಸಹಕಾರಿ ಸಂಘಗಳಲ್ಲಿ ತೆಗೆದುಕೊಂಡಿರುವ ಸಾಲಗಳ ಮರು ಪಾವತಿಗೆ ಜುಲೈ 31 ರ ವರೆಗೆ
ವಿಸ್ತರಣೆ ಮಾಡಲಾಗುವುದು ಎಂದರು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅನ್ವಯ ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಉಚಿತ ಅಕ್ಕಿ, ಆಹಾರ ಧಾನ್ಯ ವಿತರಣೆ
ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವವರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಣೆ ನೀಡಲಾಗುವುದು.
ಎಪಿಎಲ್ ರವರಿಗೆ 15 ರೂಪೈನಂತೆ 10 ಕೆ.ಜಿ ಅಕ್ಕಿ ವಿತರಿಸಲಾಗುವುದು.
ಬಿಬಿಎಂಪಿ ಕಾರ್ಮಿಕರಿಗೆ ಇಂದಿರಾ ಕ್ಯಾಂಟಿನ್ ನಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಉಚಿತ ಲಸಿಕೆ
ಕೋರೋನಾ ಸೋಂಕಿತರಿಗೆ ಸರ್ಕಾರ ನಿಯೋಜಿಸಿದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು.
18-45 ವರ್ಷದೊಳಗಿನವರಿಗೆ ಉಚಿತ ಲಸಿಕೆ,
ಕೋವಿಡ್ ನಿರ್ವಹಣೆಗೆ ಎಸ್ ಡಿ ಆರ್ ಎಫ್ ಹಣವನ್ನು ಪ್ರತಿ ಗ್ರಾ.ಪಂ.ಗಳಿಗೆ 50,000 ನೀಡಲಾಗುವುದು. ಇದರಿಂದ 6,000 ಗ್ರಾ.ಪಂ. ಅನುಕೂಲವಾಗಲಿದೆ ಎಂದರು.
ಮೂರು ದಿನಗಳೊಳಗೆ 2,150 ವೈದ್ಯರ ನೇಮಕ ಮಾಡಲಾಗುವುದು. ಕೋವಿಡ್ ಹೆಚ್ಚಿರುವ ಗ್ರಾ.ಪಂ. ಪರಿಸ್ಥಿತಿಯನ್ನು
ವೀಡಿಯೋ ಸಂವಾದದ ಮೂಲಕ ಚರ್ಚಿಲಾಗುವುದು.
ಲೈನ್ ಮ್ಯಾನ್, ಶಿಕ್ಷಕರು, ಗ್ಯಾಸ್ ಸಪ್ಲೈಯಳನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಲಾಗುವುದು ಎಂದರು. EMI ಬಗ್ಗೆ RBI ನಿರ್ಧರಿಸುತ್ತೆ ಎಂದರು
ಲಾಕ್ ಡೌನ್ ಮುಂದುವರಿಕೆ ?

ಲಾಕ್ ಡೌನ್ ವಿಸ್ತರಣೆ ಬಗ್ಗೆ ಮುಂದಿನ ದಿನದಲ್ಲಿ ಹೇಳಲಾಗುವುದು. 24 ರವರೆಗೆ ಲಾಕ್ ಡೌನ್ ಇರಲಿದೆ ಎಂದಿದ್ದಾರೆ.


































