ಕಾಪು : ಕಾಪು ಪುರಸಭಾ ವ್ಯಾಪ್ತಿಯಲ್ಲಿ ಹೋಂ ಐಸೋಲೇಶನ್‌ನಲ್ಲಿದ್ದ ನಾಲ್ವರು ಮುಂಬೈಗೆ ತೆರಳಿದ್ದು, ಇವರ ವಿರುದ್ಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಕಾಪುವಿನ ಲೈಟ್ ಹೌಸ್ ವಾರ್ಡ್‌ನ ಕೋಟ್ಯಾನ್ ಮೂಲಸ್ಥಾನದ ಬಳಿ ಪಡುವಿನಲ್ಲಿ ವಾಸವಿದ್ದ 4 ಮಂದಿ ಕೋವಿಡ್ 19 ಪಾಸಿಟಿವ್ ರೋಗಿಗಳು ಮೇ 18 ರಿಂದ ಹೋಂ ಐಸೋಲೇಶನ್ ನಲ್ಲಿದ್ದರು. ಆದರೆ ಐಸೋಲೇಶನ್ ಆದೇಶವನ್ನು ಉಲ್ಲಂಘಿಸಿ, ತಮ್ಮಿಂದ ಕೋವಿಡ್ 19 ಮಾರಕ ರೋಗ ಬೇರೆಯವರಿಗೆ ಹರಡುವುದೆಂದು ತಿಳಿದಿದ್ದರೂ ಕೂಡ ನಿರ್ಲಕ್ಷತನದಿಂದ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮುಂಬೈಗೆ ಹೋಗಿದ್ದಾರೆ. ಇವರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
Advertisement. Scroll to continue reading.

In this article:DC Jagadeesh, Diksoochi news, diksoochi Tv, diksoochi udupi, kaup police station
Click to comment

































