ರಾಮನಗರ : ಎಸ್ ಆರ್ ಎಸ್ ಟ್ರಾವೆಲ್ಸ್ ಮತ್ತು ಲಾಜಿಸ್ಟಿಕ್ಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ಟಿ.ರಾಜಶೇಖರ್(78) ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ಮೂಲದವರಾದ ರಾಜಶೇಖರ್ ಸೆ.17, 1943ರಂದು ಜನಿಸಿದ್ದರು. ಡಿಫ್ಲೋಮಾ ಇನ್ ಆಟೋಮೊಬೈಲ್ ವ್ಯಾಸಂಗ ಮಾಡಿದ್ದಾರೆ. ಹಲವು ಸಂಸ್ಥೆಗಳಲ್ಲಿ ದುಡಿದಿರೋ ಅವರು ಎಸ್ ಆರ್ ಎಸ್ ಟ್ರಾವೆಲ್ಸ್ ಮತ್ತು ಲಾಜಿಸ್ಟಿಕ್ಸ್ ಸಂಸ್ಥೆಯನ್ನು 1971ರಲ್ಲಿ ಸ್ಥಾಪಿಸಿದರು.
ಒಂದು ಬಸ್ ನಿಂದ 3 ಸಾವಿರಕ್ಕೂ ಅಧಿಕ ಬಸ್
ಸಾರಿಗೆ ವ್ಯವಸ್ಥೆಗೆ ರಾಜಶೇಖರ್ ನೀಡಿರೋ ಕೊಡುಗೆಯಿಂದ ಖ್ಯಾತ ನಾಮರಾದರು. ಟೂರಿಸ್ಟ್ ಬುಕ್ಕಿಂಗ್ ಏಜೆಂಟ್, ಟ್ರಾವೆಲ್ ಏಜೆಂಟ್ ಆಗಿದ್ದ ಅವರು ಕೇವಲ ಒಂದು ಬಸ್ ಮೂಲಕ ಆರಂಭಿಸಿಇದೀಗ 3000 ಕ್ಕೂ ಅಧಿಕ ಬಸ್ ಗಳನ್ನು ಅವರು ಸ್ಥಾಪಿಸಿರುವ ಎಸ್ ಆರ್ ಎಸ್ ಟ್ರಾವೆಲ್ಸ್ ಹೊಂದಿದೆ. ಬೆಂಗಳೂರು ಕೇಂದ್ರ ಕಚೇರಿಯಾಗಿದ್ದು, ಮುಂಬೈ, ಆಂಧ್ರಪ್ರದೇಶದ ವಿಜಯವಾಡ, ತಮಿಳುನಾಡಿನ ಚೆನ್ನೈ ಸೇರಿದಂತೆ ಹಲವೆಎ ತನ್ನ ಶಾಖೆಯನ್ನು ಹೊಂದಿದೆ. ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರೋ ಎಸ್ ಆರ್ ಎಸ್ ಸಂಸ್ಥೆಗೆ 50 ವರ್ಷ ತುಂಬಿರುವ ಈ ಸಂದರ್ಭದಲ್ಲಿ ಮಾಲೀಕನನ್ನು ಕಳೆದುಕೊಂಡಿದ್ದೆ. ಕಳೆದ 10 ದಿನಗಳ ಹಿಂದೆ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮಗಳು ಮೇಘ ಹಾಗೂ ಅಳಿಯ ದೀಪಕ್ ರನ್ನು ಅವರು ಅಗಲಿದ್ದಾರೆ.


































