ಉಡುಪಿ : ಮದುವೆಯಿಂದಾಗಿಯೂ ಕೊರೋನಾ ಹಬ್ಬುತ್ತಿದ್ದು, ಮೇ 25 ರಿಂದ ಜೂನ್ 7 ರವರೆಗೆ ಮದುವೆ ಕಾರ್ಯಕ್ರಮಗಳು ನಡೆಯುವಂತಿಲ್ಲ. ನಿಶ್ಚಿತಾರ್ಥ, ಬೀಗರ ಔತಣ ಕಾರ್ಯಗಳನ್ನೂ ನಡೆಸಿದರೆ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಡಿಸಿ ಜಗದೀಶ್ ಹೇಳಿದ್ದಾರೆ.
ವಿವಾಹ ಸಮಾರಂಭ ನಡೆಸಿದವರ ಮೇಲೆ ಮಾತ್ರವಲ್ಲ, ಯಾರೂ ಭಾಗವಹಿಸುತ್ತೀರೋ ಅವರ ಮೇಲೂ ಕ್ರಿಮಿನಲ್ ಕೇಸ್ ಹಾಕಲಾಗುವುದು. ಇವತ್ತು ಸಂಜೆಯವರೆಗೆ ಯಾರು ಅನುಮತಿ ಪಡೆದಿದ್ದೀರೋ ಅವರಿಗೆ ಮಾತ್ರ ಅವಕಾಶ ಎಂದು ಡಿಸಿ ಹೇಳಿದ್ದಾರೆ.
ಬೇಕರಿಗಳಿಗೆ ಬುಧವಾರ ಅವಕಾಶ
ಬೇಕರಿಯವರು ಮಾಲೀಕರು ಅನುಮತಿ ಕೇಳಿದ್ದು, ಅವರಿಗೆ ಬುಧವಾರ 6 ಗಂಟೆಯಿಂದ 10 ಗಂಟೆಯ ವರೆಗೆ ಅವಕಾಶ ನೀಡಲಾಗುವುದು. ಹಾಗೆಯೇ ಮಳೆಯಿಂದಾಗಿ ಹಾನಿಯಾಗಿದ್ದು ಸರಿ ಪಡಿಸುವ ಸಲುವಾಗಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ, ಎಲೆಕ್ಟ್ರಿಕಲ್ ವಸ್ತುಗಳನ್ನು ಮಾರಾಟ ಮಾಡುವವರಿಗೂ ಬುಧವಾರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯಿಂದ ಅವಕಾಶ ನೀಡಲಾಗಿದೆ.

ವಾಹನ ಮುಟ್ಟುಗೋಲು
ಸುಮ್ಮನೆ ನೆಪ ಹೇಳಿಕೊಂಡು ಬರುವವರ ವಾಹನಗಳನ್ನು ಮುಟ್ಟುಗೋಲು ಹಾಕಲಾಗುವುದು. ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.