Connect with us

Hi, what are you looking for?

Diksoochi News

Uncategorized

ಲಾಕ್ ಡೌನ್ ನಡುವೆ ವಿಮಾನದಲ್ಲಿ ಮದುವೆ; ವೈರಲ್ ಆಯ್ತು ಸುದ್ದಿ

0

ಚೆನ್ನೈ : ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಮೇ 31ರ ವರೆಗೂ ಲಾಕ್ ಡೌನ್ ವಿಸ್ತರಿಸಲಾಗಿದೆ. ವಾರದಲ್ಲಿ ಒಂದು ದಿನ ರಿಯಾಯಿತಿ ನೀಡಿ, ವೀಕೆಂಡ್ ನಲ್ಲಿ ಮಾತ್ರ ರಾತ್ರಿ ಒಂಭತ್ತು ಗಂಟೆಯವರೆಗೂ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ.
ಈ ನಡುವೆ ಮೇ 23ರಂದು ವಿಮಾನದಲ್ಲಿ ಮಧುರೈ ಮೂಲದ ಜೋಡಿಯೊಂದು ಮದುವೆಯಾಗಿ ಸುದ್ದಿಯಾಗಿದೆ. ರಾಕೇಶ್ ಹಾಗೂ ದೀಕ್ಷನಾ ಮಧುರೈ-ತೂತುಕುಡಿ ವಿಮಾನದಲ್ಲಿ ತಮ್ಮ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಸ್ಪೈಸ್ ಜೆಟ್ ವಿಮಾನವನ್ನು ಬಾಡಿಗೆಗೆ ಪಡೆದುಕೊಂಡು, 130 ಅತಿಥಿಗಳ ಸಮ್ಮುಖದಲ್ಲಿ ಮದುವೆಯಾಗಿದ್ದು ಇದೀಗ ಸುದ್ದಿಯಾಗಿದ್ದಾರೆ.

ದೀಕ್ಷನಾ ಹಾಗೂ ರಾಕೇಶ್ ಕಳದ ವಾರವೇ ಖಾಸಗಿ ಸಮಾರಂಭ ಏರ್ಪಡಿಸಿ ಮದುವೆಯಾಗಿದ್ದರು. ಆದರೆ, ರಾಜ್ಯದಲ್ಲಿ ಲಾಕ್ ಡೌನ್ ವಿನಾಯಿತಿ ಘೋಷಿಸುತ್ತಿದ್ದಂತೆಯೇ ವಿಮಾನದಲ್ಲಿ ಮದುವೆಯಾಗುವ ಯೋಜನೆ ರೂಪಿಸಿದ್ದಾರೆ. ಮದುವೆ ಸ್ಮರಣೀಯವಾಗಿಸಿಕೊಳ್ಳಲು ವಿಮಾನ ವಿವಾಹ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಎಲ್ಲಾ 130 ಮಂದಿ ತಮ್ಮ ಸಂಬಂಧಿಗಳಾಗಿದ್ದು, ಎಲ್ಲರೂ ಆರ್ ಟಿ ಪಿ ಸಿ ಆರ್ ಪರೀಕ್ಷೆ ಮಾಡಿಸಿಕೊಂಡಿದ್ದು, ಎಲ್ಲ ವರದಿಯೂ ನೆಗೆಟಿವ್ ಬಂದಿದೆ ಎಂದು ಅವರು ಹೇಳಿದ್ದಾರೆ.

ವಿಮಾನ ಸಿಬ್ಬಂದಿಗೆ ಮದುವೆಯ ಮಾಹಿತಿ ಇರಲಿಲ್ಲವೆಂದು ವಿಮಾನ ನಿಲ್ದಾಣ ನಿರ್ದೇಶಕ ಸ್ಪಷ್ಟನೆ ನೀಡಿದ್ದು, ಕೊರೋನಾ ನಿಯಮ ಉಲ್ಲಂಘನೆ ಕುರಿತು ತನಿಖೆಗೆ ಮುಂದಾಗಿದ್ದು ಈ ಬಗ್ಗೆ ಡಿಸಿಜಿಐ ಸ್ಪೈಸ್ ಜೆಟ್ ನಿಂದ ವರದಿ ಕೇಳಲಾಗಿದೆ ಎಂದು ತಿಳಿದು ಬಂದಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!