ವರದಿ: ಶಫೀ ಉಚ್ಚಿಲ
ಪಡುಬಿದ್ರಿ : ಮೇ 15 ರಂದು ಸಮುದ್ರದಲ್ಲಿ ಮುಳುಗಿ ಪಡುಬಿದ್ರಿಯ ಕಾಡಿಪಟ್ಣದ ಕಡಲ ತೀರದಲ್ಲಿ ಪತ್ತೆಯಾದ ಟಗ್ ಮೇಲಕ್ಕತ್ತುವಲ್ಲಿ ಸಫಲತೆಯನ್ನು ಕಂಡಿದ್ದು,ಟಗ್ನ ಒಳಭಾಗದಲ್ಲಿ ಓರ್ವ ಸಿಬ್ಬಂದಿಯ ಮೃತದೇಹ ಪತ್ತೆಯಾಗಿದ್ದು,ಇನ್ನಿಬ್ಬರ ದೇಹದ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಮೃತರನ್ನು ನವಿ ಮುಂಬಯಿ ಮೂಲದ ಅಸ್ಪಾಖ್ ಅಲಿ ಕಲ್ಪೆ ಎಂದು ಗುರುತಿಸಲಾಗಿದೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಡುಪಿಯತ್ತ ಸಾಗಿಸಲಾಗಿದ್ದು,ಅಲ್ಲಿಂದ ಹುಟ್ಟೂರಿಗೆ ಕೊಂಡೊಯ್ಯಲಾಗುವುದು ಎಂದು ತಿಳಿದು ಬಂದಿದೆ.
Advertisement. Scroll to continue reading.