ಬೆಂಗಳೂರು : ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಸಪ್ನಾ ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಸಿ,ಶಾ ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಯಿಂದ ಅವರು ಬಳಲುತ್ತಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಶೇಷಾದ್ರಿಪುರದ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮಂಗಳವಾರ ವಿಧಿವಶರಾಗಿದ್ದಾರೆ. ನಿತಿನ್, ದೀಪಕ್ ಮತ್ತು ಪರೇಶ್ ಎಂಬ ಮೂವರು ಪುತ್ರರನ್ನು ಸುರೇಶ್ ಶಾ ಅಗಲಿದ್ದಾರೆ
ಪುಟ್ಟ ಬುಕ್ ಹೌಸ್ ಅತಿದೊಡ್ಡ ಮಳಿಗೆಯಾಗಿ ಬೆಳೆಯಿತು
1966ರಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪುಟ್ಟದಾಗಿ ಸಪ್ನಾ ಬುಕ್ ಹೌಸ್ ನ್ನು ಸುರೇಶ್ ಶಾ ಆರಂಭಿಸಿದರು. ಈಗ 19 ಶಾಖೆಗಳನ್ನು ಒಳಗೊಂಡು ಅತಿದೊಡ್ಡ ಪುಸ್ತಕ ಮಳಿಗೆಯಾಗಿ ತಲೆ ಎತ್ತಿ ನಿಂತು, ಓದುಗರನ್ನು ಸದಾ ಕೈ ಬೀಸಿ ಕರೆಯುತ್ತಿದೆ. ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಕನ್ನಡ ಪುಸ್ತಕಗಳನ್ನು ಓದುಗರ ಅಂಗೈಗೆ ಇಟ್ಟು ಓದಿಸುತ್ತಿದೆ.


ಸಿಎಂ ಸಂತಾಪ
ಪ್ರಸಿದ್ಧ ಪುಸ್ತಕ ಮಳಿಗೆಯ ಸಂಸ್ಥಾಪಕನ ನಿಧನಕ್ಕೆ ಅನೇಕ ಪುಸ್ತಕ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ. ಸಿಎಂ ಯಡಿಯೂರಪ್ಪರವರೂ ಸಂತಾಪ ಸೂಚಿಸಿದ್ದು, ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಕುಟುಂಬದವರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.
