ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಆಶ್ರಮವೊಂದರಲ್ಲಿ 210 ಮಂದಿಗೆ ಕೊರೋನಾ ದೃಢ ಪಟ್ಟಿದೆ. ಈ ಆಶ್ರಮದಲ್ಲಿ ವೃದ್ಧರು ಮತ್ತು ಮನೋರೋಗಿಗಳಿದ್ದಾರೆ. ಒಟ್ಟು 270 ಮಂದಿ ಇದ್ದು, ಶನಿವಾರ ಸಾಮೂಹಿಕ ಪರೀಕ್ಷೆ ನಡೆಸಿದಾಗ 210 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ. ಧರ್ಮಸ್ಥಳದ ರಜತಾದ್ರಿ ವಸತಿ ಗೃಹಕ್ಕೆ ಸೋಂಕಿತರನ್ನು ಸ್ಥಳಾಂತರಿಸಲಾಗಿದೆ.