ಚಂದನವನ : ಇಂದು ಚಂದನವನದ ಕ್ರೇಜಿ ಸ್ಟಾರ್ ಗೆ 60 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಹಾಗಾಗಿ ರವಿಮಾಮ ನಟನೆಯ ಕನ್ನಡಿಗ' ಚಿತ್ರದ ಟೀಸರ್ ಬಿಡುಗಡೆ ಆಗಿದೆ. ತಲೆಮಾರುಗಳಿಂದ ಕನ್ನಡ ಭಾಷೆ ಮತ್ತು ಪರಂಪರೆಯನ್ನು ಕಾಪಾಡುತ್ತಾ ಬಂದಿರುವ ಕುಟುಂಬದ ಸದಸ್ಯನಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಗುಣಭದ್ರ’ ಎಂಬ ವಿದ್ವಾಂಸನಾಗಿ ಅವರು ಪಾತ್ರವಾಗಿದ್ದು, ಬಿಡುಗಡೆಯಾಗಿರುವ ಟೀಸರ್ ನಲ್ಲಿ ರವಿಮಾಮರ ಲುಕ್ ಹೇಗಿರಲಿದೆ ಅನ್ನೋದು ದೃಢಪಟ್ಟಿದೆ.
ಚಿತ್ರಕ್ಕ ಗಿರಿರಾಜ್ ಬಿ.ಎಂ ನಿರ್ದೇಶನವಿದೆ. ಜಯಶ್ರೀ, ಬಾಲಾಜಿ ಮನೋಹರ್ ಮೊದಲಾದವರು ಪಾತ್ರವಾಗಿದ್ದಾರೆ. ಜೊತಗೆ ಟಾಮ್ ಆಲ್ಟರ್ ಮಗ ಜೇಮೀ ಆಲ್ಟರ್ ಈ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ.