ಉಡುಪಿ: ಡಾ. ಅಬ್ದುಲ್ ರಜಾಕ್ ಯು.ಕೆ ಅವರು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಸಂಸ್ಥೆಯ ಎಫ್.ಎ.ಸಿ.ಸಿ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಈ ಸಾಧನೆಯನ್ನು ಸಮಾಜ ಸೇವಾ ವೇದಿಕೆಯ ಅಧ್ಯಕ್ಷ ಮುಹಮ್ಮದ್ ಫಾರೂಕ್ ಚಂದ್ರನಗರ ಅಭಿನಂದಿಸಿದ್ದಾರೆ.
ಮಣಿಪಾಲ ಕಸ್ತೂರ್ಬ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಾಗಿ ಉತ್ತಮ ಸೇವೆಯನ್ನು ಸಲ್ಲಿಸಿರುವ ಡಾ.ಅಬ್ದುಲ್ ರಝಾಕ್ ಯು.ಕೆ ಇವರ ಸೇವೆಯನ್ನು ಗುರುತಿಸಿ ಅಮೇರಿಕಾದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ
ಗೌರವಿಸಿದೆ. ಇವರು ವೈದ್ಯಕೀಯ ರಂಗದಲ್ಲಿ ಇನ್ನಷ್ಟು ಸೇವೆಯನ್ನು ಸಲ್ಲಿಸುವ ಮೂಲಕ ವಿಶ್ವದ ಬೇರೆ ಬೇರೆ ರಾಷ್ಟ್ರಗಳು ಗುರುತಿಸುವಂತಾಗಲಿ ಎಂದು ಫಾರೂಕ್ ಚಂದ್ರ ನಗರ ಹಾರೈಸಿದ್ದಾರೆ.
Advertisement. Scroll to continue reading.

In this article:Diksoochi news, diksoochi Tv, diksoochi udupi, Dr.Abdul Razak, faruq chandranagar
Click to comment

































