ವರದಿ : ಶಫೀ ಉಚ್ಚಿಲ
ಕಾಪು: ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಕುರಾಲು ಜನವಸತಿ ಪ್ರದೇಶದಲ್ಲಿ ಚಿರತೆಯೊಂದು ಜನರಿಗೆ ಭಯ ಹುಟ್ಟಿಸುತ್ತಿತ್ತು. ಇದೀಗ ನಿನ್ನೆ (ರವಿವಾರ) ತಡರಾತ್ರಿ ಚಿರತೆ ಬೋನಿಗೆ ಬಿದ್ದಿದ್ದು, ಈ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ.
ಕುರಾಲ್ ರೆನ್ನಿ ಕುಂದರ್ ಎಂಬವರ ಮನೆ ಬಳಿ ಚಿರತೆಯ ಓಡಾಟದ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಕಾರ್ಯೋನ್ಮುಖರಾಗಿದ್ದು, ಚಿರತೆಯ ಭೇಟೆಗಾಗಿ ಬೋನನ್ನು ಇಟ್ಟಿದ್ದರು. ಚಿರತೆ ಆಹಾರದ ಭೇಟೆಯನ್ನು ಅರಸಿ ಬಂದು ಬೋನು ಸೇರುವ ಮೂಲಕ ಕಾರ್ಯಾಚರಣೆ ಯಶಸ್ಸು ಕಂಡಿದೆ. ನಾಲ್ಕು ವರ್ಷ ಪ್ರಾಯದ ಗಂಡು ಚಿರತೆ ಎನ್ನಲಾಗಿದೆ.

ಕಾರ್ಯಾಚರಣೆಯಲ್ಲಿ ಡಿವೈ.ಅರ್.ಎಫ್.ಒ ಜೀವನ್ ದಾಸ್ ಶೆಟ್ಟಿ, ಡಿವೈ.ಅರ್.ಎಫ್.ಒ ಗುರುಪ್ರಸಾದ್, ಫಾರೆಸ್ಟ್ ಗಾರ್ಡ್ ಎಚ್. ಜಯರಾಮ ಶೆಟ್ಟಿ, ಎಫ್.ಜಿ ಅಭಿಲಾಷ್, ಪುರುಷೋತ್ತಮ ಹಾಗು ಎಸಿ.ಎಫ್.ಒ ಕ್ಲಿಪರ್ಡ್ ಲೋಬೊ ಭಾಗಿಯಾಗಿದ್ದರು.
Advertisement. Scroll to continue reading.

In this article:Diksoochi news, diksoochi Tv, diksoochi udupi, kaup news, kural, leopard
Click to comment

































