Connect with us

Hi, what are you looking for?

Diksoochi News

Uncategorized

ಸದ್ದಿಲ್ಲದೇ ಮದುವೆಯಾದ ನಟಿ ಪ್ರಣಿತಾ ಸುಭಾಷ್!

0

ಬಹುಭಾಷಾ ನಟಿ ಪ್ರಣಿತಾ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದೀಗ ಈ ಬಗ್ಗೆ ಪ್ರಣೀತಾ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ಕೊಟ್ಟಿದ್ದು. ಕೋವಿಡ್ ಕಾರಣದಿಂದಾಗಿ ಯಾರಿಗೂ ತಿಳಿಸದೆ ಮದುವೆಯಾಗಿರುವುದಾಗಿ ಹೇಳಿದ್ದಾರೆ.
ಉದ್ಯಮಿ ನಿತಿನ್ ರಾಜು ಎಂಬವರೊಂದಿಗೆ ಪ್ರಣಿತಾ ಮದುವೆ ಮೇ 30 ರಂದು ಕನಕಪುರ ರೆಸಾರ್ಟ್ ಒಂದರಲ್ಲಿ ನಡೆದಿದೆ. ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅವರು ಮದುವೆಯಾಗಿದ್ದಾರೆ.
ಕನ್ನಡದ ಪೊರ್ಕಿ ಸಿನಿಮಾ ಮೂಲಕ ಪ್ರಣಿತಾ ಸುಭಾಷ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು, ಜರಾಸಂಧ, ಭೀಮಾ ತೀರದಲ್ಲಿ, ಬ್ರಹ್ಮ, ವಿಸೆಲ್, ಅಂಗಾರಕ, ಮಾಸ್ ಲೀಡರ್ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು ಚಿತ್ರಗಳಲ್ಲೂ ಪಾತ್ರವಾಗಿದ್ದು, ಹಿಂದಿಯಲ್ಲಿ ಭುಜ್, ಹಂಗಾಮಾ 2 ವಿನಲ್ಲೂ ಪ್ರಣಿತಾ ಅಭಿನಯಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!