ಬೆಂಗಳೂರು : ಕರ್ನಾಟಕ ಹೈಕೋರ್ಟ್ ಮಹತ್ವದ ಹೆಜ್ಜೆ ಇಟ್ಟಿದೆ. ಕೋರ್ಟ್ ಹಾಲ್ ಗೆ ಮಾತ್ರ ಸೀಮಿತವಾಗಿದ್ದ ಕಲಾಪ ಈಗ ಜನ ಸಾಮಾನ್ಯರ ಮುಂದೆಯೂ ತೆರೆದುಕೊಳ್ಳಲಿದೆ. ಹೌದು, ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ಕೋರ್ಟ್ ನಂ.1 ರ ಕಲಾಪವನ್ನು ಯೂಟ್ಯೂಬ್ ಮೂಲಕ ನೇರಪ್ರಸಾರ ಮಾಡುವುದಕ್ಕೆ ಚಾಲನೆಯನ್ನು ನೀಡಿದ್ದಾರೆ. ಹಾಗಾಗಿ ಇನ್ನುಮುಂದೆ ಯೂಟ್ಯೂಬ್ ನಲ್ಲಿ ನೇರ ಪ್ರಸಾರ ನೋಡಬಹುದಾಗಿದೆ. ಕಳೆದ ವರ್ಷ ಗುಜರಾತ್ ಹೈಕೋರ್ಟ್ ಕಲಾಪ ನೇರ ಪ್ರಸಾರ ಮಾಡುವ ನಿರ್ಧಾರ ಕೈಗೊಂಡಿತ್ತು. ಇದೀಗ ಹೈಕೋರ್ಟ್ ಯೂಟ್ಯೂಬ್ ಮೂಲಕ ಜನಸಾಮಾನ್ಯರಿಗೆ ಕಲಾಪವನ್ನು ತಲುಪಿಸುವ ಕಾರ್ಯ ಕೈಗೊಂಡಿದೆ.