ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಎತ್ತು ಗುದ್ದಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದಲ್ಲಿ ನಡೆದಿದೆ. ಅಬ್ಬಿಕಟ್ಟೆ ನಿವಾಸಿ ಸೀತು(52) ಮೃತ ದುರ್ದೈವಿ. ಕೊಟ್ಟಿಗೆಯಲ್ಲಿ ಇದ್ದ ದನವನ್ನು ಮೇಯಲು ಕಟ್ಟಲು ಹೋದಾಗ ಅಲ್ಲಿಯೇ ಮೇಯಲು ಬಿಟ್ಟ ಎತ್ತು ಅವರಿಗೆ ಗುದ್ದಿದೆ. ಇದರ ಪರಿಣಾಮ ಅವರ ಕುತ್ತಿಗೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಕೂಡಲೇ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.