Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಹನೆಹಳ್ಳಿ ಗ್ರಾ.ಪಂ.ಗೆ ತಹಶೀಲ್ದಾರ್ ಕಿರಣ್ ಗೌರಯ್ಯ ಭೇಟಿ; ಟಾಸ್ಕ್ ಫೋರ್ಸ್ ಸಭೆ

0


ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಬಾರಕೂರು ಹನೆಹಳ್ಳಿ ಗ್ರಾಮಪಂಚಾಯತಿಗೆ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿ ಟಾಸ್ಕ್ ಫೋರ್ಸ್ ಸಭೆ ನಡೆಸಿದರು. ಜೂನ್ 2ರಿಂದ 7 ರ ತನಕ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಸೂಚಿಸಿದರು.
ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಉಸ್ತುವಾರಿ ಸಚಿವರ ಮತ್ತು ಶಾಸಕರ ಸಮ್ಮುಖದಲ್ಲಿ ಜರುಗಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕನಿಷ್ಟ 50 ಮಂದಿಗೆ ಕೋವಿಡ್ ಸೊಂಕು ಇರುವಲ್ಲಿ ಈ ಕ್ರಮ ಜರುಗಿಸುವಂತೆ ನಡೆದ ನಿರ್ಣಯದಂತೆ ಉಡುಪಿ ಜಿಲ್ಲಾಧಿಕಾರಿ ಜಿ .ಜಗದೀಶ್ ರವರು ನೀಡಿದ ಆದೇಶದಂತೆ ಕಳ್ತೂರು ಮತ್ತು ಹನೆಹಳ್ಳಿ ಗ್ರಾಮ ಪಂಚಾಯತಿಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.


ಲಾಕ್ ಡೌನ್ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲಾ ಭಾಗವನ್ನು ಬುಧವಾರ 10 ಗಂಟೆಗೆ ಬಂದ್ ಮಾಡಲಾಗಿ ಔಷಧಿ ಅಂಗಡಿ ಹೊರತಾಗಿ ಮತ್ತೆ ಯಾರೂ ಹೊರ ಹೋಗದಂತೆ ಮತ್ತು ಒಳಗೆ ಬರದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಕೂಡಾ ಗ್ರಾಮ ಪಂಚಾಯತಿಗೆ ಸೂಚಿಸಿದ್ದಾರೆ.
ಹನೆಹಳ್ಳಿ ಗ್ರಾಮಪಂಚಾಯತಿ ಅಧ್ಯಕ್ಚ ಚಂದ್ರಶೇಖರ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಅರುಂಧತಿ ಏಸುಮನೆ , ಕಾರ್ಯದರ್ಶಿ ಉಮೇಶ್ ಕಲ್ಯಾಣಪುರ, ಬ್ರಹ್ಮಾವರ ಡೆಪ್ಯೂಟಿ ತಹಶೀಲ್ದಾರ್ ಲಕ್ಮ್ಮಿನಾರಾಯಣ ಭಟ್, ಗ್ರಾಮ ಲೆಕ್ಕಿಗ ಭೀಮರಾಜ್ ಹೊರಟ್ಟಿ ಮತ್ತು ಹನೆಹಳ್ಳಿ ಟಾಸ್ಕ್ ಫೋರ್ಸ್ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!