ಕುಂದಾಪುರ : 50 ಪ್ರಕರಣಗಳಿಗಿಂತ ಹೆಚ್ಚಿರುವ ಗ್ರಾ.ಪಂಚಾಯತ್ ಗಳನ್ನು ಲಾಕ್ಡೌನ್ ಮಾಡುವ ಕ್ರಮವನ್ನು ಜಿಲ್ಲಾಡಳಿತ ಕೈಗೊಂಡಿದೆ. ನಾಳೆಯಿಂದ ಕೋಟೇಶ್ವರ ಗ್ರಾ.ಪಂ ವ್ಯಾಪ್ತಿ ಸಂಪೂರ್ಣ ಸೀಲ್ಡೌನ್ ಆಗಲಿದೆ.
ಗ್ರಾಮಪಂಚಾಯತ್ ಗಡಿ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಬಗ್ಗೆ ಈಗಾಗಲೇ ಚಿಂತನೆ ನಡೆದಿದೆ.
ಜನರಿಗೆ ಮಾಹಿತಿ ನೀಡಲು ಗ್ರಾಮ ಪಂಚಾಯತಿಯಿಂದ ಮೈಕ್ ಮೂಲಕ ಪ್ರಚಾರ ಕೈಗೊಳ್ಳಲಾಗಿದೆ.

ಖರೀದಿಗೆ ಮುಗಿಬಿದ್ದ ಜನ
ಕುಂದಾಪುರ ವ್ಯಾಪ್ತಿಯ ಅತೀ ದೊಡ್ಡ ಪೇಟೆಗಳ ಪೈಕಿ ಕೋಟೇಶ್ವರ
ನಾಲ್ಕೈದು ಗ್ರಾ.ಪಂ ವ್ಯಾಪ್ತಿಯ ಜನರು ನಿತ್ಯ ಬಳಕೆ ವಸ್ತು ಖರೀದಿಗೆ ಬರುವ ಕೇಂದ್ರವಾಗಿದೆ.
ನಾಳೆಯಿಂದ ಕಂಪ್ಲೀಟ್ ಸೀಲ್ಡೌನ್ ಹಿನ್ನೆಲೆ ಇಂದು ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದರು.
ಜನರ ಅನುಕೂಲಕ್ಕಾಗಿ 6 ಗಂಟೆಯಿಂದ 11 ಗಂಟೆಯವರೆಗೆ ಖರೀದಿಗೆ ಅವಕಾಶಕಾಶ ನೀಡಲಾಗಿತ್ತು.
ಮೀನು, ಮೊಟ್ಟೆ, ಮಾಂಸ, ತರಕಾರಿ, ಹಣ್ಣು, ದಿನಸಿ ಸಾಮಾಗ್ರಿ ಖರೀದಿಗೆ ಜನರು ಆಗಮಿಸಿದ್ದರು.

ನಾಳೆಯಿಂದ ಹಾಲು, ಮೆಡಿಕಲ್, ಆಸ್ಪತ್ರೆಗೆ ಮಾತ್ರವಷ್ಟೆ ಅವಕಾಶ ನೀಡಲಾಗಿದೆ. ಜನರು ಗ್ರಾ.ಪಂ ಜೊತೆ ಕೈಜೋಡಿಸಬೇಕು. ನಿಯಮ ಪಾಲಿಸಬೇಕು. ಶೀಘ್ರ ಕೊರೋನಾ ಮುಕ್ತ ಕೋಟೇಶ್ವರ ಗ್ರಾ.ಪಂ ಮಾಡಲು ಸಹಕರಿಸಬೇಕು ಎಂದು ಗ್ರಾ.ಪಂ ಅಧ್ಯಕ್ಷ ಕೃಷ್ಣ ಗೊಲ್ಲ ಜನರಲ್ಲಿ ಮನವಿ ಮಾಡಿದ್ದಾರೆ.



































