Connect with us

Hi, what are you looking for?

Diksoochi News

ರಾಷ್ಟ್ರೀಯ

`ಟಿಇಟಿ’ ಅರ್ಹತಾ ಪ್ರಮಾಣ ಪತ್ರ ಜೀವಿತಾವಧಿಗೆ ಮಾನ್ಯ : ಸಚಿವ ರಮೇಶ್ ಪೋಖ್ರಿಯಾಲ್

0

ನವದೆಹಲಿ : ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಅರ್ಹತಾ ಪ್ರಮಾಣ ಪತ್ರಗಳ ಸಿಂಧುತ್ವವನ್ನು ಜೀವಿತಾವಧಿಗೆ ವಿಸ್ತರಿಸಲಾಗಿದೆ. ಈ ಮೊದಲು ಏಳು ವರ್ಷಗಳಿಗೆ ಸೀಮಿತವಾಗಿತ್ತು. ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಗುರುವಾರ ಘೋಷಿಸಿದ್ದಾರೆ.
ಟಿಇಟಿ ಅರ್ಹತಾ ಪ್ರಮಾಣ ಪ್ರಮಾಣಪತ್ರಗಳ ಸಿಂಧುತ್ವದ ಅವಧಿಯನ್ನು 2021 ರಿಂದ ಪೂರ್ವಾನ್ವಯ ಪರಿಣಾಮದೊಂದಿಗೆ ಏಳು ವರ್ಷಗಳಿಂದ ಜೀವಿತಾವಧಿಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ. ಏಳು ವರ್ಷಗಳ ಅವಧಿ ಈಗಾಗಲೇ ಮುಗಿದಿರುವ ಅಭ್ಯರ್ಥಿಗಳಿಗೆ ಮರುಮೌಲ್ಯೀಕರಿಸಲು ಮತ್ತು ಹೊಸ ಟಿಇಟಿ ಪ್ರಮಾಣಪತ್ರಗಳನ್ನು ನೀಡಲು ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಭೋದನಾ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಮಾಡಲು ಬಯಸುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಇದು ಸಕಾರಾತ್ಮಕ ಹೆಜ್ಜೆಯಾಗಲಿದೆ ಎಂದು ಪೊಖ್ರಿಯಾಲ್ ಹೇಳಿದ್ದಾರೆ.

ಟಿಇಟಿ ಅರ್ಹತಾ ಪ್ರಮಾಣ ಪತ್ರವು ಒಬ್ಬ ವ್ಯಕ್ತಿಯು ಶಾಲಾ ಶಿಕ್ಷಕರಾಗಿ ನೇಮಕಾತಿಗೆ ಅರ್ಹರಾಗಲು ಅತ್ಯಗತ್ಯ ಅರ್ಹತೆಗಳಲ್ಲಿ ಒಂದು. ಪರೀಕ್ಷೆಗಳನ್ನು ರಾಜ್ಯ ಸರ್ಕಾರಗಳು ನಡೆಸುತ್ತವೆ. ಈ ಹಿಂದೆ ಏಳು ವರ್ಷಕ್ಕೆ ಪ್ರಮಾಣ ಪತ್ರದ ಸಿಂಧುತ್ವ ನಿಗದಿಯಾಗಿತ್ತು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!