Connect with us

Hi, what are you looking for?

Diksoochi News

ಸಿನಿಮಾ

`777 ಚಾರ್ಲಿ’ ಟೀಸರ್ ಔಟ್; ಪ್ರೇಕ್ಷಕನ ಮನಗೆದ್ದ ಮುದ್ದು ಚಾರ್ಲಿಯ ಪಯಣ

0

ಚಂದನವನ: ಇಂದು(ಜೂ.6) ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟು ಹಬ್ಬ. ಹಾಗಾಗಿ 777 ಚಾರ್ಲಿ ಚಿತ್ರತಂಡ ಚಿತ್ರದ ಚಿತ್ರದ ಟೀಸರ್ ರಿಲೀಸ್ ಮಾಡಿದೆ. ವಿಶೇಷ ಅಂದ್ರೆ ನಾಯಕನನ್ನೇ ತೋರಿಸದೆ ಈ ಟೀಸರ್ ತುಂಬಾ ಚಾರ್ಲಿಯ ಪಯಣವೇ ಇರೋದು. ಚಾರ್ಲಿ ಅನುಭವಿಸುವ ಕಷ್ಟ, ಆಕೆಯ ತುಂಟಾಟಗಳನ್ನು ತೋರಿಸಲಾಗಿದೆ. ಕೊನೆಗೆ ನಾಯಕ ಧರ್ಮ(ರಕ್ಷಿತ್ ಶೆಟ್ಟಿ)ಯನ್ನು ಭೇಟಿಯಾಗುವುದನ್ನು ತೋರಿಸಲಾಗಿದೆ. ಸಹಜವಾಗಿಯೇ ಈ ಟೀಸರ್ ಶ್ವಾನ ಪ್ರಿಯರಿಗೆ ಸಕತ್ ಇಷ್ಟವಾಗಿದೆ. ಇನ್ನು ಟೀಸರ್ ನಲ್ಲಿ ಬರುವ ಹಾಡಿಗೂ ಎಲ್ಲರೂ ಫಿದಾ ಆಗಿದ್ದು, ನೊಬಿನ್ ಪೌಲ್ ಸಂಗೀತ, ನಾಗಾರ್ಜುನ್ ಶರ್ಮ ಸಾಹಿತ್ಯ, ಶುಭಮ್ ರಾಯ್ ದನಿ ಸೊಗಸಾಗಿ ಮೂಡಿಬಂದಿದೆ.


ಚಿತ್ರದ ಟೀಸರ್ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮಲಯಾಳಂ ಟೀಸರ್ ನ್ನು ಪೃಥ್ವಿರಾಜ್ ಸುಕುಮಾರನ್, ನಿವಿನ್ ಪೌಲಿ, ಕುಂಜಾಕೊ ಬೊಬನ್, ಟೊವಿನೊ ಥೋಮಸ್, ಉನ್ನಿ ಮುಕುಂದನ್, ಅನ್ನಾ ಬೆನ್, ನಿಖಿಲಾ ವಿಮಲ್, ಆಂಟೋನಿ ವರ್ಗೀಸ್ ಬಿಡುಗಡೆ ಮಾಡಿದ್ದಾರೆ. ತಮಿಳು ಟೀಸರ್ ನ್ನು ನಿರ್ದೇಶಕ ಕಾರ್ತಿಕ್ ಸುಬ್ಬರಾಜು, ತೆಲುಗು ಟೀಸರ್ ನ್ನು ನಟ ನಾನಿ ಬಿಡುಗಡೆ ಮಾಡಿದ್ದಾರೆ.

777 ಚಾರ್ಲಿ ಚಿತ್ರವನ್ನು ಕಿರಣ್ ರಾಜ್ ಕೆ. ನಿರ್ದೇಶಿಸಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಸಂಗೀತ ಶೃಂಗೇರಿ, ರಾಜ್ ಬಿ.ಶೆಟ್ಟಿ, ದಾನೀಶ್ ಸೇಠ್ ಮೊದಲಾದವರು ಪಾತ್ರವಾಗಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!