ವರದಿ: ಶಫೀ ಉಚ್ಚಿಲ
ಕಾಪು : ಸರಕಾರದ ಆದೇಶದಂತೆ ಕಾಪು ತಾಲೂಕಿನ ಸಿ ಪ್ರವರ್ಗದ 30 ಅಧಿಸೂಚಿತ ಸಂಸ್ಥೆ ದೈವ – ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ರಮೇಶ್ ಹೆಗ್ಡೆ ಕಲ್ಯಾ, ಅಭಿವೃದ್ಧಿ (ಜಿರ್ಣೋದ್ದಾರ) ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ವಾಸುದೇವ ಶೆಟ್ಟಿ, ಕಾಪು ತಾಲೂಕಿನ ಉಪ ತಹಸೀಲ್ದಾರ್ ಶ್ರೀ ಚಂದ್ರಹಾಸ್ ಬಂಗೇರ ಉಪಸ್ಥಿತರಿದ್ದರು. ಆಹಾರ ಸಾಮಗ್ರಿಗಳ ಕಿಟ್ ನ್ನು ವ್ಯವಸ್ಥಾಪನ ಸಮಿತಿಯ ಸರ್ವಸದಸ್ಯರು ಮತ್ತು ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿಯವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು.
Advertisement. Scroll to continue reading.



































