ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಯುವ ಕಾಂಗ್ರೇಸ್ ವತಿಯಿಂದ ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ಮತ್ತು ಆಕಾಶವಾಣಿ ವ್ರತ್ತ ಮತ್ತು ಮಹೇಶ್ ಆಸ್ಪತ್ರೆಯ ಬಳಿ ರಾಷ್ಟ್ರಿಯ ಹೆದ್ದಾರಿ ೬೬ ರಲ್ಲಿ ಸಂಚರಿಸುವ ಲಾರಿ ಚಾಲಕರು ಮತ್ತು ಇನ್ನಿತರ ವಾಹನ ಚಾಲಕರಿಗೆ ಮಧ್ಯಾಹ್ನ ಊಟದ ಕಿಟ್ ನ್ನು ನೀಡಲಾಯಿತು. ದೂರದ ಊರಿಂದ ಹಲವಾರು ಮಂದಿ ಚಾಲಕರು ಅಗತ್ಯ ವಸ್ತುಗಳ ಸಾಗಾಟಕ್ಕೆ ಅನುಮತಿ ಇದ್ದು, ಅವರ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಊಟ ನೀಡಲಾಯಿತು.

ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ , ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು, ಡಾ ಸುನೀತಾ ಶೆಟ್ಟಿ, ತಾಜುದ್ದೀನ್, ಅಲ್ತಾಫ್ ಮತ್ತು ಉಡುಪಿ ನಗರಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.
Advertisement. Scroll to continue reading.

In this article:brahmavar, congress, diksoochgi tv, Diksoochi news, diksoochi udupi
Click to comment

































