Connect with us

Hi, what are you looking for?

Diksoochi News

ಕರಾವಳಿ

ಕಾಪು: ಪತ್ರಕರ್ತರಿಗೆ 25 ಸಾವಿರ ಮೌಲ್ಯದ ಕೊಡುಗೆ; ಪತ್ರಕರ್ತರ ಸುರಕ್ಷತೆಯತ್ತ ಗಮನವಿರಲಿ: ಫಾರೂಕ್ ಚಂದ್ರನಗರ

0

ಕಾಪು: ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರಿಗೆ ಕಾಪು-ಕಳತ್ತೂರು ಸಮಾಜ ಸೇವಾ ವೇದಿಕೆ ವತಿಯಿಂದ N95ಮಾಸ್ಕ್,ಕೊಡೆ,ಸ್ಯಾನಿಟೈಸರ್ ಸೇರಿದಂತೆ ಸುಮಾರು25 ಸಾವಿರ ಮೌಲ್ಯದ ವಸ್ತುಗಳನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಸಮಾಜ ಸೇವಾ ವೇದಿಕೆಯ ಅಧ್ಯಕ್ಷ ಮುಹಮ್ಮದ್ ಫಾರೂಕ್ ಚಂದ್ರನಗರ ಮಾತನಾಡಿ, ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆಯೂ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಸುರಕ್ಷತೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಸಂಸ್ಥೆಯ ವತಿಯಿಂದ ಅಗತ್ಯ ವಸ್ತುಗಳನ್ನು ಕೊಡುಗೆಯಾಗಿ ನೀಡಲು ಸಂತೋಷವಾಗುತ್ತದೆ. ಈಗಾಗಲೇ ದಾನಿಗಳ ಸಹಕಾರದಿಂದ ಸುಮಾರು 5 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ಆರ್ಹ ಕುಟುಂಬಗಳಿಗೆ ಆಹಾರ ಸಮಾಗ್ರಿ ಹಾಗು ವೈದ್ಯಕೀಯ ಪರಿಕರಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ವೇದಿಕೆಯು ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ನಿರ್ವಹಿಸಲಿದೆ ಎಂದರು.

ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ್ ಕುಂಜೂರು, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫೀ ಉಚ್ಚಿಲ, ಉಪಾಧ್ಯಕ್ಷರಾದ ವಿಜಯ ಆಚಾರ್ಯ ಉಚ್ಚಿಲ, ಕೋಶಾಧಿಕಾರಿ ಪುಂಡಲೀಕ ಮರಾಠೆ, ಜೊತೆ ಕಾರ್ಯದರ್ಶಿ ಪ್ರಕಾಶ್ ಸುವರ್ಣ ಕಟಪಾಡಿ, ಪ್ರೆಸ್ ಕ್ಲಬ್ ಸಂಯೋಜಕ ಸಂತೋಷ್ ಕಾಪು, ಗ್ಲಾಡಿಸ್ ಡಿ ಅಲ್ಮೇಡಾ, ಝಹೀರ್ ಅಹಮದ್ ಬೆಳಪು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!