ಮಿಜೋರಾಂ: ವಿಶ್ವದ ಅತಿ ದೊಡ್ಡ ಕುಟುಂಬದ ಮುಖಂಡ ಜಿಯೋನಾ ಚಾನಾ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. 38 ಪತ್ನಿಯರು, 89 ಮಕ್ಕಳು ಹಾಗೂ 33 ಮಂದಿ ಮರಿ ಮಕ್ಕಳನ್ನು ಜಿಯೋನಾ ಚಾನಾ ಅಗಲಿದ್ದಾರೆ. ತಮ್ಮ ಧರ್ಮದ ಧಾರ್ಮಿಕ ಮುಖಂಡರಾಗಿ ಗುರುತಿಸಿಕೊಂಡಿದ್ದ ಅವರು ಮಧುಮೇಹ ಹಾಗೂ ರಕ್ತದೊತ್ತಡದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
1945 ರ ಜುಲೈ 21 ರಂದು ಜನಿಸಿದ ಜಿಯೋನಾ ಕುಟುಂಬ ಪರ್ವತ ತಪ್ಪಲಿನ ಬಕ್ತಾಂಗ್ ತ್ಲಾಂಗ್ನುವಾಮ್ ಗ್ರಾಮದಲ್ಲಿ `ಛೌನ್ ಥಾರ್ ರನ್’ ಎಂಬ ನಾಲ್ಕು ಅಂತಸ್ಥಿತ ಮನೆಯಲ್ಲಿ ವಾಸವಾಗಿದೆ. ಈ ಮನೆಯಲ್ಲಿ 100 ಕೊಠಡಿಗಳಿದ್ದು, ಒಂದೇ ಅಡುಗೆ ಮನೆ ಹಂಚಿಕೊಳ್ಳುತ್ತಿದ್ದಾರೆ. ಈ ಕುಟುಂಬ ಪ್ರವಾಸಿಗರ ಆಕರ್ಷಣೀಯ ಕಾರಣವಾಗಿತ್ತು. ಹೀಗಾಗಿ ದೇಣಿಗೆ ರೂಪದಲ್ಲಿಯೂ ನೆರವು ದೊರೆಯುತ್ತಿದೆ ಎಂದು ತಿಳಿದು ಬಂದಿದೆ.

ಮಿಜೋರಾಂ ಮುಖ್ಯಮಂತ್ರಿ ಸಂತಾಪ
ಜಿಯಾನ್ ನಿಧನಕ್ಕೆ ಮಿಜೋರಾಂ ಮುಖ್ಯಮಂತ್ರಿ ಜೋರಾಂತಂಗ ಸಂತಾಪ ಸೂಚಿಸಿದ್ದಾರೆ. “ಮಿಜೋರಾಂ ಭಾರವಾದ ಹೃದಯದೊಂದಿಗೆ 38 ಹೆಂಡತಿಯರು ಮತ್ತು 89 ಮಕ್ಕಳೊಂದಿಗೆ ವಿಶ್ವದ ಅತಿದೊಡ್ಡ ಕುಟುಂಬದ ಮುಖ್ಯಸ್ಥರೆಂದು ನಂಬಲಾದ ಶ್ರೀ ಜಿಯಾನ್(76) ಅವರಿಗೆ ವಿದಾಯವನ್ನು ಹೇಳಿದೆ. ಮಿಜೋರಾಂ ಮತ್ತು ಬಕ್ತಾಂಗ್ ತ್ಲಾಂಗ್ನುವಾಮ್ನಲ್ಲಿರುವ ಅವರ ಗ್ರಾಮ ಈ ಕುಟುಂಬದಿಂದಾಗಿ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ರೆಸ್ಟ್ ಇನ್ ಪೀಸ್ ಸರ್! ” ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.

