ವರದಿ:ಶಫೀ ಉಚ್ಚಿಲ
ಕಾಪು: ಕೋವಿಡ್ ಸಂಕಷ್ಟ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿದ ಸುಮಾರು 500 ಕುಟುಂಬಗಳಿಗೆ ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ ಕಾಪು ಇವರ ವತಿಯಿಂದ ಪಡಿತರ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ತನ್ನ ಸ್ವ-ಕಚೇರಿಯಲ್ಲಿ ಚಾಲನೆ ನೀಡಿ ನಂತರ ಮನೆ ಮನೆಗೆ ವಿತರಿಸಿದರು.
Advertisement. Scroll to continue reading.

ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ” ಕೋವಿಡ್ ಸಂಕಷ್ಟ ಕಾಲದಲ್ಲಿ ಜನಸಾಮಾನ್ಯರಿಗೆ ಸ್ಪಂದಿಸುವ ನಿಟ್ಟಿನಲ್ಲಿ 500 ಕುಟುಂಬಗಳಿಗೆ ಪಡಿತ ಕಿಟ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು ,ಕಳೆದ ವರ್ಷವೂ ಇದೇ ರೀತಿಯ ಸೇವೆ ಮಾಡಿದ್ದೆವು ಹಾಗೂ ವಿಟಮಿನ್ ಸಿ ಮಾತ್ರೆಗಳನ್ನು ಹಾಗೂ ಇತರ ಪರಿಕರಗಳನ್ನು ವಿತರಿಸುವ ಮೂಲಕ ಜನಸೇವೆಯ ಕರ್ತವ್ಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯನ್ಮುಖನಾಗಿದ್ದೇವೆ. ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಎಲ್ಲಾರಿಗೂ ಧನ್ಯವಾದ ಅರ್ಪಿಸುತ್ತೇನೆಂದರು” ಈ ಸಂಧರ್ಭದಲ್ಲಿ
ಜಯರಾಮ ಆಚಾರ್ಯರು, ಶೇಖರ ಪೂಜಾರಿ, ರವಿಚಂದ್ರ ಶೆಟ್ಟಿ,ಪ್ರಭಾಕರ್ ಶೆಟ್ಟಿ,ಉಪಸ್ಥಿತರಿದ್ದರು.
In this article:Diksoochinews, diksoochitv, diksoochiudupi, JDS, Kaup, yogish shetty kaup

Click to comment