ಪಡುಬಿದ್ರಿ: ಸ್ಕೂಟರ್ ಗೆ ಕಾರು ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ಪಡುಬಿದ್ರಿ ಠಾಣೆ ವ್ಯಾಪ್ತಿಯ ಎರ್ಮಾಳ್ ಪೆಟ್ರೋಲ್ ಬಂಕ್ ಬಳಿ ಇಂದು ನಡೆದಿದೆ.
ಗಾಯಗೊಂಡವರನ್ನು ಮುದರಂಗಡಿ ಕೆಮುಂಡೇಲು ನಿವಾಸಿ ಡ್ಯಾನಿಶ್ ಎಂದು ಗುರುತಿಸಲಾಗಿದೆ. ಇವರು ಅದಮಾರು ಶಾಲಾ ವಾಹನದ ಚಾಲಕನಾಗಿದ್ದು, ಬೆಳಿಗ್ಗೆ ಪಡುಬಿದ್ರಿಗೆ ದಿನಬಳಕೆ ಸಾಮಗ್ರಿ ಖರೀದಿಸಿ, ಮನೆಗೆ ಹೋಗುತ್ತಿದ್ದ ವೇಳೆ ಎರ್ಮಾಳ್ ಪೆಟ್ರೋಲ್ ಬಂಕ್ ಬಳಿಯ ಹೆದ್ದಾರಿ ತಿರುವಿನಲ್ಲಿ ಮಂಗಳೂರು ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ಕಾರು, ಇವರ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಧಾವಿಸಿ, ತನಿಖೆ ನಡೆಸುತ್ತಿದ್ದಾರೆ.
Advertisement. Scroll to continue reading.