ಕಾಪು : ಕರಾವಳಿಯಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದ್ದು, ವಿವಿಧೆಡೆ ನೆರೆಯ ಭೀತಿ ಎದುರಾಗಿದೆ. ಶನಿವಾರ ಸಂಜೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಗ್ಗುಪ್ರದೇಶಗಳೆಲ್ಲಾ ಜಲಾವೃತಗೊಂಡಿವೆ. ನೆರೆ ನೀರು ರಭಸವಾಗಿ ಹರಿದು ಬರುತ್ತಿದ್ದು ಭತ್ತದ ಗದ್ದೆಗಳು ಸಂಪೂರ್ಣ ಮುಳುಗಿ ಬಿಟ್ಟಿವೆ.

ಕಾಪು ತಾಲ್ಲೂಕಿನ ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಮುಂಭಾಗದ ಬೈಲು ಪ್ರದೇಶವು ಸಂಪೂರ್ಣ ನೆರೆ ನೀರಿನಿಂದಾವೃತಗೊಂಡಿದ್ದು, ದೇವಸ್ಥಾನದ ಅಂಗಣಕ್ಕೆ ನೀರು ಹರಿಯುತ್ತಿದೆ. ಕಾಪು ತಾಲೂಕಿನ ಬೆಳಪು, ಅದಮಾರು, ಎರ್ಮಾಳು, ಮಜೂರು, ಕುತ್ಯಾರು, ಇನ್ನಂಜೆ ಸಹಿತ ವಿವಿಧೆಡೆಗಳಲ್ಲಿನ ಹೊಳೆ ತೀರದಲ್ಲಿ ಬರುವ ತಗ್ಗು ಪ್ರದೇಶಗಳಲ್ಲಿ ಮತ್ತು ಬೈಲು ಪ್ರದೇಶಗಳಲ್ಲಿ ಮತ್ತಷ್ಟು ನೆರೆಯ ಭೀತಿ ಎದುರಾಗಿದೆ.
Advertisement. Scroll to continue reading.



































