ಬೆಂಗಳೂರು: ತಂದೆ ಹಾಗೂ ಮಲತಾಯಿ ಸೇರಿಕೊಂಡು ಮೊದಲ ಹೆಂಡತಿ ಮಕ್ಕಳಿಗೆ ಚಿತ್ರಹಿಂಸೆ ನೀಡುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು ಆರೋಪಗಳನ್ನು ಬಂಧಿಸಲಾಗಿದೆ. ತಮಿಳು ನಾಡು ಮೂಲದ ಸೆಲ್ವನ್ ಮತ್ತು ಆತನ ಎರಡನೇ ಪತ್ನಿ ಸತ್ತಯಾ ವಿಕೃತಿ ಮೆರೆದಿರುವ ಆರೋಪಿಗಳು.
ಸೆಲ್ವನ್ ಮೊದಲ ಪತ್ನಿಗೆ ಮೂರು ಮಕ್ಕಳಿದ್ದು, ಕೆಲ ವರ್ಷಗಳ ಹಿಂದೆ ಆಕೆ ಮೃತಪಟ್ಟಿದ್ದರು. ಮತ್ತೆ ಎರಡನೇ ಮದುವೆಯಾಗಿದ್ದ ಸೆಲ್ವನ್ ಗೆ ಮತ್ತೆರಡು ಮಕ್ಕಳು ಜನಿಸಿದ್ದರು.
ಮಲತಾಯಿ ಹಾಗೂ ತಂದೆ ಸೆಲ್ವನ್ ಸೇರಿಕೊಂಡು ಮೊದಲ ಪತ್ನಿಯ ಮಕ್ಕಳಿಗೆ ಚಿತ್ರಹಿಂಸೆ ನೀಡಲು ಆರಂಭಿಸಿದ್ದರು ಎಂದು ತಿಳಿದು ಬಂದಿದೆ. ಮಕ್ಕಳ ಕಾಲಿನ ಚರ್ಮ ಸುಲಿದು, ಬಿಸಿನೀರು ಎರಚಿ ವಿಕೃತಿ ಮರೆದಿದ್ದಾರೆ ಎನ್ನಲಾಗಿದೆ.
ಬ್ಲೇಡ್, ಚಾಕು, ಸ್ಕ್ರೂ ಡ್ರೈವರ್ , ಸುತ್ತಿಗೆಯಿಂದ ಮಕ್ಕಳ ಮೇಲೆ ಭಯಾನಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವಿಕೃತಿ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು,
ಕೂಡಲೇ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಮಕ್ಕಳನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.