ಕಾಪು : ರೈಲು ಹಾದುಹೋಗಿ ಅರ್ಧ ಗಂಟೆಯಾದರೂ ರೈಲ್ವೆ ಕ್ರಾಸಿಂಗ್ ಗೇಟ್ ತೆರವುಗೊಳಿಸಲು ವಿಳಂಬವಾಗಿ ವಾಹನ ಸಂಚಾರ ಸ್ಥಗಿತಗೊಂಡ ಘಟನೆ ಕಾಪು ತಾಲೂಕಿನ ಎರ್ಮಾಳು-ಮದರಂಗಡಿ ರಸ್ತೆಯ ಅದಮಾರು ರೈಲ್ವೇ ಗೇಟ್ ನಲ್ಲಿ ನಡೆದಿದೆ.
ಅದಮಾರು ಬಳಿಯ ಕೊಂಕಣ ರೈಲು ಮಾರ್ಗದಲ್ಲಿ ಗುರುವಾರ ಮಧ್ಯಾಹ್ನ ಸಿಎಸ್ಟಿ ರೈಲು ಅದಮಾರು ರೈಲ್ವೇ ಗೇಟ್ ಬಳಿಯಿಂದ ಹಾದುಹೋಗುವ ವೇಳೆ ಗೇಟ್ ಹಾಕಲಾಗಿತ್ತು. ರೈಲು ಹಾದು ಹೋದ ಬಳಿಕ ರೈಲ್ವೇ ಸಿಬ್ಬಂದಿ ಗೇಟ್ ತೆರವುಗೊಳಿಸುವ ವೇಳೆ ಗೇಟ್ ಮೇಲಕ್ಕೆತ್ತುವ ಕಬ್ಬಿನ ರೋಪ್ ಕಡಿತಗೊಂಡಿದೆ. ಇದರಿಂದಾಗಿ ಗೇಟ್ ತೆರವುಗೊಳಿಸಲಾಗದೆ ಸುಮಾರು ಅರ್ಧ ಗಂಟೆಗಳ ಕಾಲ ವಾಹನಗಳು ಸಾಲುಗಟ್ಟಿ ನಿಂತು ಸಂಚಾರ ಸ್ಥಗಿತಗೊಂಡಿತು. ಬಳಿಕ ಸಿಬ್ಬಂದಿಗಳು ಪರಿಶ್ರಮದಿಂದ ತಾತ್ಕಾಲಿಕವಾಗಿ ಮಧ್ಯಭಾಗದಲ್ಲಿ ಲಾಕ್ ತೆರೆದು ಗೇಟ್ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
Advertisement. Scroll to continue reading.



































