ಕಾಪು :ಅಂತರಾಷ್ಟ್ರೀಯ ಮಾದಕವಸ್ತು ಮತ್ತು ಅಕ್ರಮ ಕಳ್ಳಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಜಪ್ತಿ ಮಾಡಿದ ಒಂದು ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿ ಪಡೆದು ಉಡುಪಿ ಜಿಲ್ಲೆಯ ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿರುವ ಆಯುಷ್ಯ್ ಎನ್ವೈಯರ್ಮೆಂಟ್ ಪ್ರೈವೇಟ್ ಲಿಮಿಟೆಡ್ ಘಟಕದಲ್ಲಿ ನಾಶಪಡಿಸಲಾಯಿತು.
30,13,100 ಮೌಲ್ಯದ 103 ಕೆ.ಜಿ 304 ಗ್ರಾಂ ಗಾಂಜಾ, 9,82,500 ಮೌಲ್ಯದ ಹೈಡ್ರೋವೀಡ್ ಗಾಂಜಾ 101 ಗ್ರಾಂ,30,33,000 ಮೌಲ್ಯದ 919 ಎಂ.ಡಿ.ಎಂ.ಎ ಮಾತ್ರೆಗಳು, 30 ಲಕ್ಷ ಮೌಲ್ಯದ 990 ಎಲ್.ಎಸ್.ಡಿ ಸ್ಟಿಪ್ಸ್ ಸೇರಿ ಒಟ್ಟು 1,00,28,600 ರೂ.ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.

ಅತೀ ಹೆಚ್ಚು ಮಣಿಪಾಲ ಪೊಲೀಸ್ ಠಾಣೆಯಲ್ಲಿ 12, ಉಡುಪಿ ನಗರ ಠಾಣೆಯಲ್ಲಿ 10, ಸಿಇಎನ್ ರಲ್ಲಿ 8,ಕುಂದಾಪುರ 6,ಕಾಪು 5,ಪಡುಬಿದ್ರಿ ಹಾಗೂ ಕುಂದಾಪುರ ಗ್ರಾಮಾಂತರದಲ್ಲಿ ತಲಾ 2,ಗಂಗೊಳ್ಳಿ,ಹಿರಿಯಡ್ಕ, ಮತ್ತು ಶಿರ್ವಾ ಠಾಣೆಗಳಲ್ಲಿ ತಲಾ 1 ಸೇರಿ 13 ವರ್ಷಗಳಿಂದ ಒಟ್ಟು 50 ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ಮಾದಕ ವಸ್ತುಗಳಾಗಿವೆ.
ಈ ಸಂದರ್ಭದಲ್ಲಿ ಎಸ್ಪಿ ವಿಷ್ಣುವರ್ಧನ್, ಎಎಸ್ಪಿ ಕುಮಾರ ಚಂದ್ರ, ಡಿವೈಎಸ್ಪಿ ಪ್ರಮೋದ್ ಕುಮಾರ್,ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್,ಉಡುಪಿ ಡಿವೈಎಸ್ಪಿ ಸುಧಾಕರ ನಾಯ್ಕ್ ,ಕಾರ್ಕಳ ಡಿವೈಎಸ್ಪಿ ಎಸ್ ವಿಜಯ ಪ್ರಸಾದ್,ವೃತ್ತನಿರೀಕ್ಷಕರಾದ ಮಂಜುನಾಥ್,ಸಂಪತ್, ಮಂಜುನಾಥ ಗೌಡ, ಪ್ರಮೋದ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.



































