Connect with us

Hi, what are you looking for?

Diksoochi News

ರಾಷ್ಟ್ರೀಯ

ಜಮ್ಮು ವಾಯುಪಡೆ ವಿಮಾನ ನಿಲ್ದಾಣದಲ್ಲಿ ಸ್ಪೋಟ

0

ಶ್ರೀನಗರ : ಜಮ್ಮು ವಾಯುಪಡೆ ವಿಮಾನ ನಿಲ್ದಾಣದ ತಾಂತ್ರಿಕ ವಿಭಾಗದಲ್ಲಿ ಸ್ಪೋಟ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಬಾಂಬ್ ನಿಷ್ಕ್ರಿಯದಳ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದೆ. ಶನಿವಾರ ತಡರಾತ್ರಿ ಸುಮಾರು 1.45 ಕ್ಕೆ ಐದು ನಿಮಿಷಗಳ ಅಂತರದಲ್ಲಿ ಸ್ಪೋಟದ ಸದ್ದು ಕೇಳಿದೆ. ಒಂದು ಸ್ಪೋಟದಿಂದ ಕಟ್ಟಡವೊದರ ಮೇಲ್ಛಾವಣಿ ಕುಸಿದಿದ್ದರೆ, ಮತ್ತೊಂದು ಸ್ಪೋಟದಿಂದ ಕಟ್ಟಡವೊಂದರ ನೆಲಭಾಗಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ. ಸ್ಟೋಟಕ್ಕೆ ಕಾರಣ ತಿಳಿದು ಬಂದಿಲ್ಲ. ತನಿಖೆ ಮುಂದುವರೆದಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!