Connect with us

Hi, what are you looking for?

Diksoochi News

ಸಿನಿಮಾ

ಗೋಲ್ಡನ್ ಸ್ಟಾರ್ ಗೆ ಹುಟ್ಟುಹಬ್ಬದ ಸಂಭ್ರಮ; ಗಣಿ ಚಿತ್ರಗಳ ಪೋಸ್ಟರ್ಸ್ ಬಿಡುಗಡೆ, ಕ್ಷಮೆಯಾಚಿಸಿದ ಸಿಂಪಲ್ ಸುನಿ

0

ಇಂದು ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಕೋವಿಡ್ ಕಾರಣದಿಂದ ಪ್ರತಿವರ್ಷದಂತೆ ಈ ವರ್ಷ ಬರ್ತಡೇ ಸೆಲೆಬ್ರೆಷನ್ ಇಲ್ಲದಿದ್ದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಗೋಲ್ಡನ್ ಸ್ಟಾರ್ ನ ಬರ್ತಡೇ ಸಂಭ್ರಮ ಜೋರಾಗಿಯೇ ಇದೆ.
ಗಣೇಶ್ ನಟನೆಯ ಚಿತ್ರಗಳ ಟೀಸರ್, ಪೋಸ್ಟರ್ ಗಳ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿವೆ ಚಿತ್ರತಂಡ ಯೋಗರಾಜ್ ಭಟ್‌ ನಿರ್ದೇಶನದ ‘ಗಾಳಿಪಟ-2’ ಚಿತ್ರತಂಡವು ಮೋಷನ್ ಪೋಸ್ಟರ್ ಬಿಡುಗಡೆ ಮಾಡುತ್ತಿದೆ.

ಇದರೊಂದಿಗೆ ಜೂಮ್ ಹಾಗೂ ಆರೆಂಜ್ ಚಿತ್ರಗಳನ್ನು ಮಾಡಿರೋ ಪ್ರಶಾಂತ್ ರಾಜ್ ಗಣೇಶ್ ಕಾಂಬೆನೇಷನ್ ಮತ್ತೆ ಬರಲಿದೆ. ಪ್ರೊಡಕ್ಷನ್ ನಂಬರ್ 7 ಪೋಸ್ಟರ್ ಮೂಲಕ ಇದು ಕನ್ಫಮ್ ಆಗಿದೆ.


ಇದರ ಜೊತೆಗೆ ‘ಸಖತ್’ ಸಿನಿಮಾದ ಟೀಸರ್ ಬಿಡುಗಡೆ ಮಾಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ನಿರ್ದೇಶಕ ಸುನಿ ಈ ಚಿತ್ರದ ಟೀಸರ್ ಇಲ್ಲ ಎಂದು ನಿರಾಸೆ ಮೂಡಿಸಿದ್ದಾರೆ.

ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ನಿರ್ದೇಶಕ ಸುನಿ:

Advertisement. Scroll to continue reading.

ಸಿಂಪಲ್ ಸುನಿ ಮತ್ತು ನಟ ಗಣೇಶ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ‘ಸಖತ್’ ಸಿನಿಮಾದ ಬರ್ತಡೇ ಪೋಸ್ಟರ್ ಬಿಡುಗಡೆಯಾಗಿದೆ. ಸದ್ಯಕ್ಕೆ ಪೋಸ್ಟರ್ ಮಾತ್ರ ಎಂದು ಅಭಿಮಾನಿಗಳನ್ನು ಸಮಾಧಾನ ಪಡಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ರವರ ಗಾಳಿಪಟ-2 ಮೋಷನ್ ಪೋಸ್ಟರ್ ಹಾಗೂ ತ್ರಿಬಲ್ ರೈಡಿಂಗ್ ಚಿತ್ರದ ಟೀಸರ್ ಕೂಡ ಆನಂದ್ ಆಡಿಯೋದಲ್ಲೇ ಬಿಡುಗಡೆಯಾಗಲಿದ್ದು,ನಮ್ಮ ಸಖತ್ ಸಿನೆಮಾವು ಅದೇ ಆಡಿಯೋದಿಂದ ಹೊರಬರುವುದರಿಂದ ಯೂಟ್ಯೂಬ್ ಕಲಹ ತಪ್ಪಿಸಲು, ಸಖತ್ ಚಿತ್ರದ ಟೀಸರ್ ಅನ್ನು ಸ್ವಲ್ಪ ದಿನಗಳ ಕಾಲ ಮುಂದೂಡಲಾಗಿದೆ ಎಂದು ಸುನಿ ತಿಳಿಸಿದ್ದಾರೆ.

ಸಖತ್ ಸಿನಿಮಾದ ಟೀಸರ್ ಇಲ್ಲ ಎಂದು ನಿರಾಸೆ ಮೂಡಿಸಿದ್ದ ಸುನಿ, ಗಣೇಶ್ ಜೊತೆ ಮಾಡುತ್ತಿರುವ ಮತ್ತೊಂದು ಚಿತ್ರ ‘ದಿ ಸ್ಟೋರಿ ಆಫ್ ರಾಯಗಢ’ ಸಿನೆಮಾದ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!