ಕನ್ನಡ ಕಿರುತೆರೆಯ ಖ್ಯಾತ ನಟ ದೀಪಕ್ ಮಹದೇವ್ ಮತ್ತು ನಟಿ ಚಂದನಾ ಜುಲೈ 1 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದು ಸದ್ಯದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ. ದೀಪಕ್ ಮಹಾದೇವ್ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದಾರೆ. ನಟಿ ಚಂದನಾ ಕೂಡ ಕಿರುತೆರೆ ನಟಿಯಾಗಿದ್ದು ‘ಸೀತಾ ವಲ್ಲಭ’ ಧಾರಾವಾಹಿಯಲ್ಲಿ ಅಂಕಿತಾ ಪಾತ್ರದಲ್ಲಿ ಮಿಂಚಿದ್ದು ಎಲ್ಲರ ಮನೆ ಮಾತಾಗಿದ್ದರು.
ಇದೀಗ ನಟ ದೀಪಕ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಬೆಂಗಳೂರಿನಲ್ಲಿ ಸರಳವಾಗಿ ನಿಶ್ಚಿತಾರ್ಥ ಸಮಾರಂಭದಲ್ಲಿ ದೀಪಕ್ ಮತ್ತು ಚಂದನಾ ಉಂಗುರ ಬದಲಾಯಿಸಿಕೊಂಡರು.
ಈ ಸಂದರ್ಭದಲ್ಲಿ ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು.