ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ನಟಿ ವಿದ್ಯಾ ಬಾಲನ್ ಅವರನ್ನು ಭಾರತೀಯ ಸೇನೆ ವಿಶೇಷವಾಗಿ ಗೌರವಿಸಿದೆ. ವಿದ್ಯಾ ಬಾಲನ್ ಹೆಸರನ್ನು ಕಾಶ್ಮೀರದ ಗುಲ್ಮಾರ್ಗ್ ನಲ್ಲಿರುವ ಮಿಲಿಟರಿ ಫೈರಿಂಗ್ ರೇಂಜ್ ಗೆ ನಾಮಕರಣ ಮಾಡಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿವೆ.
ಇತ್ತೀಚಿಗಷ್ಟೆ ಆಸ್ಕರ್ ಆಡಳಿತ ಮಂಡಳಿಯು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ & ಸೈನ್ಸ್‌ನಲ್ಲಿ ಕಾರ್ಯನಿರ್ವಾಹಕ ಸದಸ್ಯರ ಹೊಸ ಬ್ಯಾಚ್‌ಗೆ ವಿದ್ಯಾ ಬಾಲನ್ ಅವರನ್ನು ಆಯ್ಕೆಮಾಡಲಾಗಿದೆ.
Advertisement. Scroll to continue reading.
ಈ ವರ್ಷದ ಆರಂಭದಲ್ಲಿ ಭಾರತೀಯ ಸೇನೆಯು ಕಾಶ್ಮೀರದಲ್ಲಿ ಆಯೋಜಿಸಿದ್ದ ‘ಗುಲ್ಮಾರ್ಗ್ ವಿಂಟರ್ ಫೆಸ್ಟಿವಲ್’ ನಲ್ಲಿ ವಿದ್ಯಾ ಬಾಲನ್ ಕೂಡ ಭಾಗವಹಿಸಿದ್ದರು.